ಜಿಪಂಗೆ ಹೆಚ್ಚುವರಿ ಎಂಜಿನಿಯರ್ ನಿಯೋಜಿಸಿ
ಪಾವಗಡ: ಖಾತ್ರಿ ಯೋಜನೆ ಸೇರಿದಂತೆ ಜಿಪಂ ಯೋಜನೆಗಳು ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜಿಪಂಗೆ ಹೆಚ್ಚುವರಿ ಎಂಜಿನಿಯರ್ಗಳನ್ನು ನಿಯೋಜಿಸಿ ಎಂದು ದಲಿತ ವಿಮೋಚನಾ ಸೇನೆ ಅಧ್ಯಕ್ಷ ವಿರಪಸಮುದ್ರ ರಾಮಾಂಜಿನಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜಿಪಂ ಉಪ ವಿಭಾಗದಲ್ಲಿ ಒಟ್ಟು 11ಮಂದಿ ಎಂಜಿನಿಯರ್ಗಳ ಪೈಕಿ ಕೇವಲ 3 ಮಂದಿ ಎಂಜಿನಿಯರ್ಗಳು
ಮಾತ್ರ ಇಲಾಖೆಗೆ ನಿಯೋಜಿತರಾಗಿದ್ದು ಇದರಲ್ಲಿ ಒಬ್ಬ ಸಹಾಯಕ ಎಂಜಿನಿಯರ್ ಸದಾ ಗೈರು ಆಗುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಎಂಜಿನಿಯರ್ಗಳು ಸ್ಥಳೀಯ ರಾಜಕಾರಣದಲ್ಲಿ ನಿರತರಾಗಿ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಅಸಡ್ಡೆ ತೋರುತ್ತಿದ್ದಾರೆಂದು ಅವರು ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟ ಜಿಪಂ ಅಧಿಕಾರಿಗಳು ತಾಲೂಕಿಗೆ ಭೇಟಿ ನೀಡಿ ಈ ಬಗ್ಗೆ ತನಿಖೆ ಮಾಡಿ ತಾಲೂಕು ಜಿಪಂ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚುವರಿ ಎಂಜಿನಿಯರ್ಗಳನ್ನು ಇಲಾಖೆಗೆ ನಿಯೋಜಿಸಿ ಎಂದು ಸಂಘಟನೆಗಳ ಪದಾಧಿಕಾರಿಗಳಾದ ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣರೆಡ್ಡಿ, ದಂಡೋರ ನಾಗೇಶ್, ಇತರರು ಮನವಿ ಮಾಡಿದ್ದಾರೆ.