ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಮಲ್ಲೇಶಪ್ಪ

Vishwanath S
Updated On : 7 Feb 2014, 12:56 pm

ತುರುವೇಕೆರೆ: ಸ್ಥಳೀಯ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಕಡೇಹಳ್ಳಿಯ ಕೆ.ಬಿ. ಮಲ್ಲೇಶಪ್ಪ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ತಮ್ಮಣ್ಣ ಗೌಡರು ಅಧ್ಯಕ್ಷ ಗಾದಿಗೆ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇಂದು ಎಲ್ಲಾ ಸದಸ್ಯರ ಒಡಂಬಡಿಕೆಯನ್ವಯ ಮಲ್ಲೇಶಪ್ಪ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನೂತನವಾಗಿ ಉಪಾಧ್ಯಕ್ಷ ಸ್ಥಾನವನ್ನು ಪ್ರಾರಂಭಿಸಿರುವುದರಿಂದ ಸಹಕಾರ ಸಂಘದ ಪ್ರಥಮ ಉಪಾಧ್ಯಕ್ಷರಾಗಿ ಕೆ.ದೊಡ್ಡೇನಹಳ್ಳಿಯ ಕೆಂಚಯ್ಯ ನವರು ಅವಿರೋಧವಾಗಿ ಆಯ್ಕೆಯಾದರು.  ಕಳೆದ 2011- 12 ರ ಅವಧಿಯಲ್ಲಿ ತಮ್ಮ ಸಹಕಾರ ಸಂಘ ಸುಮಾರು 8 ಲಕ್ಷ ರು.ಗಳ ಆದಾಯ ಗಳಿಸಿದೆ. ಸಂಘದಲ್ಲಿ ಪಡಿತರ ಸೇವಾ ವಸ್ತುಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೋಟ್ ಪುಸ್ತಕಗಳು ಹಾಗೂ ಅಡಕೆಯನ್ನು ಕ್ಯಾಂಪ್ಕೋ ಸಹಯೋಗದಲ್ಲಿ ವಹಿವಾಟು ಮಾಡುತ್ತಿರುವುದರಿಂದ ಸಂಘ ಆದಾಯಗಳಿಸಲು ಸಾಧ್ಯವಾಗಿದೆ ಎಂದು ನೂತನ ಅಧ್ಯಕ್ಷ ಮಲ್ಲೇಶಪ್ಪ ತಿಳಿಸಿದರು. ಮುಂಬರುವ ದಿನಗಳಲ್ಲೂ ಸಂಘ ಹೆಚ್ಚು ಲಾಭ ಗಳಿಸುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ವೇಳೆ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ದೇವರಾಜು, ಶಿವಾನಂದ್, ಬಿ.ಸಿ.ಹೊನ್ನೇಗೌಡ, ಮಂಜುನಾಥ್, ಡಿ.ಪಿ. ರಾಜು, ತಮ್ಮಣ್ಣಗೌಡ, ಲಕ್ಷ್ಮೀಕಾಂತ್ ಹಾಗೂ ಮಾಜಿ ನಿರ್ದೇಶಕ ಶಿವಣ್ಣ ನವರು ಉಪಸ್ಥಿತರಿದ್ದರು.  ಚಿಕ್ಕನಾಯಕನಹಳ್ಳಿಯ ಸಿಡಿಓ ಲಿಂಗರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement