ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಕ್ಸಲ್ ಗ್ರಾಮಗಳ ವಸತಿ ನಿರ್ಮಾಣಕ್ಕೆ ಹೆಚ್ಚಿನ ಹಣ ವಿನಿಯೋಗಿಸಿ: ಶಾಸಕ ತಿಮ್ಮರಾಯಪ್ಪ

Vishwanath S
Updated On : 7 Feb 2014, 12:56 pm

ಪಾವಗಡ: 2.5ಕೋಟಿ ಅನುದಾನದಲ್ಲಿ ನಕ್ಸಲ್ ಗ್ರಾಮಗಳ ವಸತಿ ನಿರ್ಮಾಣಕ್ಕೆ ಹೆಚ್ಚಿನ ಹಣ ವಿನಿಯೋಗಿಸಿ
ಎಂದು ಶಾಸಕ ಕೆ.ಎಂ. ತಿಮ್ಮರಾಯಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾ.ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಸರ್ಕಾರ ಗುರುತಿಸಿದ ತಾಲೂಕಿನ ನಕ್ಸಲ್ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಮನೆಗಳಿಲ್ಲದೇ ಗುಡಿಸಲುಗಳಲ್ಲಿ ವಾಸವಾಗಿದ್ದ ಮನೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಕ್ಸಲ್ ಗ್ರಾಮಗಳಲ್ಲಿ ವಾಸವಾಗಿದ್ದ ಎಸ್‌ಸಿ, ಎಸ್‌ಟಿ, ಇತರೆ ಜನಾಂಗದ ಬಹುತೇಕ ಕಡು ಬಡವರು ಮನೆಗಳಿಲ್ಲದೇ ಇಂದಿಗೂ ಅವರು ಗುಡಿಸಲಿನಲ್ಲಿಯೇ ವಾಸವಾಗಿದ್ದು ಮೊದಲು ಅವರಿಗೆ ವಾಸಿಸಲು ಸೂಕ್ತ ಮನೆಗಳ ನಿರ್ಮಾಣಕ್ಕೆ ಆದ್ಯತೆ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿ ಒಟ್ಟು 81ನಕ್ಸಲ್ ಪೀಡಿತ ಗ್ರಾಮಗಳೆಂದು ಈಗಾಗಲೇ  ಗುರುತಿಸಿದ್ದು ಆ ಗ್ರಾಮಗಳ ಸ್ಥಿತಿಗತಿಗಳ ಬಗ್ಗೆ ಸರ್ಕಾರ  ಅಧ್ಯಯನ ಮಾಡಿ ವರದಿ ಪಡೆದಿದೆ. ಮನೆ ನಿರ್ಮಾಣ ಸೇರಿದಂತೆ ನಕ್ಸಲ್ ಗ್ರಾಮಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ 2.5ಕೋಟಿ ರು.ಹಣ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿರುವುದು ಸ್ವಾಗತದ ವಿಚಾರ. ಆದರೆ 2.5ಕೋಟಿ ಹಣದಲ್ಲಿ 81ನಕ್ಸಲ್ ಗ್ರಾಮಗಳು ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೊದಲು ಮನೆಗಳಿಲ್ಲದೇ ಅತಂತ್ರ ಸ್ಥಿತಿ ಎದುರಿಸುತ್ತಿರುವ ಗ್ರಾಮಗಳ ಮನೆಗಳ ನಿರ್ಮಾಣಕ್ಕೆ ಆದ್ಯತೆ ಕಲ್ಪಿಸಿ ಎಂದು ಅವರು ಸರ್ಕಾರಕ್ಕೆ ಅವರು ಮನವಿ ಮಾಡಿದರು.
ತಹಸೀಲ್ದಾರ್ ಮಹಮ್ಮದ್ ಅಲ್ತಾಪ್ ಪಾಷ ಮಾತನಾಡಿ ನಕ್ಸಲ್ ಗ್ರಾಮಗಳಲ್ಲಿ ಅನೇಕ ಮಂದಿ ಮನೆಗಳಿಲ್ಲದೆ ಕಡು ಬಡವರಿದ್ದು ಅವರಿಗೆ ಮೊದಲು ಮನೆ ಸೌಲಭ್ಯ ಕಲ್ಪಿಸಬೇಕಿದೆ. ಈ ಬಗ್ಗೆ ಶಾಸಕರ ಜೊತೆ ತೆರಳಿ ಪರಿಶೀಲಿಸಲಾಗಿದೆ. ಮನೆಗಳ ನಿರ್ಮಾಣದ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ನಕ್ಸಲ್ ಗ್ರಾಮಗಳಲ್ಲಿ ಮೊದಲು ಮನೆಗಳ ನಿರ್ಮಾಣ ಕಾರ್ಯ ನಡೆಯಬೇಕು. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ಸೌಲಭ್ಯ ಕಲ್ಪಿಸುವಂತೆ ತಾಪಂ ಇಒ ತಿಪ್ಪೇಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement