ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಕಲಿಸಿ: ಎಚ್. ಗೋವಿಂದರಾಜು ಅಭಿಮತ

Vishwanath S
Updated On : 7 Feb 2014, 12:57 pm

ಮಧುಗಿರಿ: ಪ್ರಾಥಮಿಕ  ಶಾಲೆಯಿಂದಲೇ  ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಕಲಿಸುವ ಮೂಲಕ ಮಕ್ಕಳನ್ನು  ಸತ್ಪ್ರಜೆಗಳನ್ನಾಗಿ ರೂಪಿಸಿಬೇಕಾದ ಅವಶ್ಯಕತೆಯಿದೆ ಎಂದು ವಿವೇಕಾನಂದ ವಿದ್ಯಾ ಮಂದಿರದ ನಿರ್ದೇಶಕ ಎಚ್. ಗೋವಿಂದರಾಜು ಅಭಿಪ್ರಾಯಪಟ್ಟರು.
ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ  ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣದಿಂದಲೇ ಮಾತೃಭಾಷೆ ಕನ್ನಡದಲ್ಲಿ ಅಗತ್ಯ ಶಿಕ್ಷಣ ನೀಡಬೇಕು. ಆಗ ಮಾತ್ರ ಮಕ್ಕಳು ಸಂಸ್ಕಾರ, ಶಿಸ್ತು, ಸಂಯಮ, ಕಲಿಯಲು ಅವಕಾಶ ಕಲ್ಪಿಸಿದಂತಾಗುತ್ತದಲ್ಲದೆ ಮಾತೃಬಾಷೆ ಮತ್ತು ಸಮಾಜದ ಜತೆಗಿನ ಸಂಬಂಧ ಗಟ್ಟಿಗೊಳ್ಳುತ್ತದೆ. ಹಾಗಾಗಿ ನಮ್ಮ ಶಾಲೆಯಲ್ಲಿ ನೆಲ ಮೂಲ ಸಂಸ್ಕೃತಿ ಶಿಕ್ಷಣಕ್ಕೆ  ಅಧಿಕ ಒತ್ತು ನೀಡಲಾಗಿದ್ದು ಪ್ರೀತಿ, ವಿಶ್ವಾಸದಿಂದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ  ಪೋಷಕರು ಮುತುವರ್ಜಿ ವಹಿಸಬೇಕು. ಶಿಕ್ಷಕರು ಕೂಡ ಮಕ್ಕಳನ್ನು ಬೌದ್ಧಿಕ ವಿಕಾಸದ ಜತೆಗೆ ಮಾನಸಿಕ ವಿಕಾಸಕ್ಕೂ ಒತ್ತು ನೀಡಿ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುವ ನಿಟ್ಟಿನಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ದಾರಿದೀಪ: ಸಾಧನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್.ರಾಮಕೃಷ್ಣಯ್ಯ, ಚಿಕ್ಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ದಾರಿದೀಪ. ಚಿತ್ರದುರ್ಗದ ತಾರ ಮಂಡಲ ಸಂಸ್ಥೆಯಿಂದ ನಡೆದ  8ನೇ ಅಂತಾರಾಷ್ಟ್ರೀಯ ವಿಜ್ಞಾನ ಪ್ರತಿಭಾನ್ವೇಷಣೆ  ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಶಾಲೆಗೆ 3ನೇ ರ್ಯಾಂಕ್ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement