ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೋದಿ ತೇರು ತುರುವೇಕೆರೆಗೂ ಬಂತು

Vishwanath S
Updated On : 14 Feb 2014, 12:23 pm

ತುರುವೇಕೆರೆ: ಭಾರತೀಯ ಜನತಾಪಕ್ಷದ  ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪುತ್ಥಳಿಯನ್ನು ಹೊತ್ತ ರಥ ತುರುವೇಕೆರೆಗೆ ಆಗಮಿಸಿತು.
ಬಿಜೆಪಿ ಮುಖಂಡ ಎಂ.ಡಿ.ಮೂರ್ತಿ, ಮಸಾಲಾ ಜಯರಾಂ, ಮಾಚೇನಹಳ್ಳಿ ರಾಮಣ್ಣ, ದೊಂಬರನಹಳ್ಳಿ ಬಸವರಾಜು ಮತ್ತಿತರ ಮುಖಂಡರು ಮೋದಿ ರಥವನ್ನು ಬರಮಾಡಿಕೊಂಡರು. ಹಗರಣಗಳ ಸುಳಿಯಲ್ಲಿ ಸಿಕ್ಕಿ ನಲುಗಿ ಹೋಗಿರುವ ಕಾಂಗ್ರೆಸ್‌ಗೆ ಮೋದಿಯದ್ದೇ ಭಯ. ಕಾಂಗ್ರೆಸ್ ತಾನು ತನ್ನ ಅಸ್ಥಿತ್ವವನ್ನು ಕಳೆದುಕೊಂಡಿರುವುದಲ್ಲದೇ ದೇಶದ ಮಾನ ಮಾರ್ಯಾದೆಯನ್ನೂ  ಮಣ್ಣುಪಾಲು ಮಾಡಿದೆ. ಈಗ ರಾಷ್ಟ್ರಕ್ಕಿರುವುದು ಮೋದಿಯೊಬ್ಬರೇ  ದೇಶದ ಆಶಾಕಿರಣವಾಗಿದ್ದಾರೆ ಎಂದು ತೇರಿನಲ್ಲಿರುವ ಧ್ವನಿವರ್ದಕದ ಮೂಲಕ ಜನರಿಗೆ ಸಾರಿ ಸಾರಿ ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಕ್ತ ಭಾರತ ಕಟ್ಟೋಣ, ದುರಾಡಳಿತದ ಕಾಂಗ್ರೆಸ್ ಅನ್ನು ತೊಲಗಿಸೋಣ ಎಂಬ ಘೋಷ ವಾಕ್ಯಗಳನ್ನು ಹೇಳುವ ಮೋದಿ ತೇರಿನಲ್ಲಿ ಸ್ವತಃ ಮೋದಿಯವರು ಭಾಷಣ ಮಾಡಿದ ಸನ್ನಿವೇಶಗಳನ್ನು ಉಳ್ಳ ವಿಡಿಯೋವನ್ನು ಪ್ರದರ್ಶಿಸಲಾಗುತ್ತದೆ. ಮುಖಂಡರಾದ ಅರಳೀಕೆರೆ ದಯಾನಂದ್, ಬೇಕರಿ ನರಸಿಂಹನ್, ಅರಶಿನದಹಳ್ಳಿ ನರಸಿಂಹಮೂರ್ತಿ ಮದಲಾದವರು ಇದ್ದರು.
ಮಂಗಳೂರಿನಿಂದ ಹೊರಟ ಈ  ತೇರು ರಾಜ್ಯಾದ್ಯಂತ ಪ್ರವಾಸ ಮಾಡಿ ಪುನಃ ಮಂಗಳೂರನ್ನು ಸೇರುವುದು ಎಂದು ಸಂಘಟರು ಹೇಳಿದರು.
ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಲು ಮನವಿ
ತಿಪಟೂರು: ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆ.15ರಂದು ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ತಿಪಟೂರು ತಾಲೂಕಿನ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಆರ್.ಜಯರಾಂ ಮನವಿ ಮಾಡಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಎ.ಪಾಟೀಲರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅಧ್ಯಕ್ಷಕೆ ವಹಿಸಲಿದ್ದು, ಹಲವಾರು ಸಚಿವರು, ಸಂಸದರು, ಶಾಲಾ ಶಿಕ್ಷಕರು ಮತ್ತಿತರರು ಭಾಗವಹಿಸಲಿದ್ದಾರೆ.
ದೊಡ್ಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಪ್ರಮಿಳಾ
ಪಾವಗಡ: ಗುರುವಾರ ನಡೆದ ಚುನಾವಣೆಯಲ್ಲಿ ದೊಡ್ಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರಮೀಳಾ ಗೋವಿಂದಪ್ಪ ಮತ್ತು ಉಪಾಧ್ಯಕ್ಷರಾಗಿ ನಿಂಗಮ್ಮ ರಾಮಾಂಜಿನಪ್ಪ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ಕಾಂಗ್ರೆಸ್ ಬಂಬಲಿತ ಪ್ರಮೀಳಾ ಗೋವಿಂದಪ್ಪ ಹಾಗೂ ಉಪಾಧ್ಯಕ್ಷರಾಗಿ ದೊಡ್ಡಹಳ್ಳಿ ಗ್ರಾಮದ ನಿಂಗಮ್ಮ ರಾಮಾಂಜಿನಪ್ಪ ಆಯ್ಕೆಯಾಗಿದ್ದು, ತಾ. ವಿವಿಧ ಪಕ್ಷಗಳ ಮುಖಂಡರ ಪ್ರತಿಷ್ಠೆಯ ಚುನಾವಣೆ ಆಗಿದ್ದ ಹಿನ್ನೆಲೆಯಲ್ಲಿ  ತೀವ್ರ ಕುತೂಹಲ ಕೆರಳಿಸಿತ್ತು. ನೀಲಮ್ಮನಹಳ್ಳಿ ಗ್ರಾಪಂ ಪಿಡಿಒ ರಂಗದಾಮಪ್ಪ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮಾಜಿ ಸಚಿವ ವೆಂಕಟರಮಣಪ್ಪ, ಹಿರಿಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಎಚ್.ವಿ. ವೆಂಕಟೇಶ್, ತಾಪಂ ಸದಸ್ಯ ಮಾರಪ್ಪ, ತಾ. ಕಾಂಗ್ರೆಸ್ ಯುವ ಅಧ್ಯಕ್ಷ ಮೈಲಾರರೆಡ್ಡಿ, ಮುಖಂಡರಾದ ಹನುಮಂತರೆಡ್ಡಿ, ಚಿಕ್ಕಹಳ್ಳಿ ವೆಂಕಟೇಶಪ್ಪ, ಡಿ.ಜೆ.ಅಶೋಕ್ ಇತರರರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.
ಭ್ರಷ್ಟಾಚಾರ ರಹಿತ ಸಮಾಜಕ್ಕೆ  ಕರೆ
ತಿಪಟೂರು: ಲೋಕಾಯುಕ್ತ ಸಂಸ್ಥೆಯೆಂದರೆ ಜನರಲ್ಲಿ ಕೇವಲ ಭ್ರಷ್ಟಾಚಾರ ನಿಯಂತ್ರಿಸುವ ಸಂಸ್ಥೆಯೆಂಬ ಅಭಿಪ್ರಾಯವಿದೆ. ಸಂಸ್ಥೆಯು 10ರಷ್ಟು ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನುಳಿದ 90ರಷ್ಟು ಕೆಲಸವನ್ನು ಸರ್ಕಾರದ ದುರಾಡಳಿತ ತೊಲಗಿಸಲು, ಕಷ್ಟಗಳ ನಿವಾರಣೆಗೆ ಆದ್ಯತೆ ನೀಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ತಿಳಿಸಿದರು.
ಶಿಕ್ಷಕರಿಂದ ಉನ್ನತ ವ್ಯಾಸಂಗಕ್ಕೆ ಅರ್ಜಿ
ಚಿಕ್ಕನಾಯಕನಹಳಿ: ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಒಂದು ವರ್ಷದ ಡಿಪ್ಲಮೋ ಇನ್ ಕಮ್ಯುನಿಕೇಷನ್ ಕೋರ್ಸ್ ಇನ್ ಇಂಗ್ಲಿಷ್ (ದೂರಶಿಕ್ಷಣ) ವ್ಯಾಸಂಗದ ಬಗ್ಗೆ 48 ವರ್ಷ ವಯೋವುತಿಯೊಳಗಿರುವ ಆಸಕ್ತ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಯೋವುತಿ ಮೀರದ ಶಿಕ್ಷಕರು ಈ ಕೋರ್ಸ್‌ಗೆ ಅರ್ಹರಾಗಿರುತ್ತಾರೆ. ಇದರ ಜೊತೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ವಿಶೇಷವಾಗಿ ವಿಜ್ಞಾನ, ಗಣಿತ, ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪದವಿ ಬಿಎ(ಆಂಗ್ಲ), ಬಿಎಸ್ಸಿ (ಪಿಸಿಎಂ, ಸಿಬಿಜೆಡ್)ಉನ್ನತ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜಿಸಲು ಆಸಕ್ತ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆ.28ಕ್ಕೆ 45 ವರ್ಷ ವಯೋವುತಿ ಮೀರದ ಶಿಕ್ಷಕರು ಈ ಕೋರ್ಸಿಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಫೆ.15 ಕೊನೆಯದಿನ.
15ರಂದು  ಶೈಕ್ಷಣಿಕ ಸಮಾವೇಶ
ಪಾವಗಡ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಬೆಂಗಳೂರು ಇವರ ವತಿಯಿಂದ ಫೆ.15ರಂದು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಂಡಿರುವುದಾಗಿ ತಾಲೂಕು ಪ್ರಾಥಮಿಕಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪಯ್ಯ ಹಾಗೂ ಕಾರ್ಯದರ್ಶಿ ಓಬಳೇಶ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಆನೇಕ ಮಂದಿ ರಾಜ್ಯ ಸಚಿವರು ಮತ್ತು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿಲಿದ್ದು, ಸಮಾವೇಶಕ್ಕೆ ಭಾಗವಹಿಸುವ ಶಿಕ್ಷಕರಿಗೆ ಫೆ,14,15,16, ಆಂದರೆ 3ದಿನಗಳು ಒಒಡಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.  ಸಂಘದ ನಿರ್ದೇಶಕರಾದ ಚಿಕ್ಕ ಒಬಳೇಶ್, ಶ್ರೀನಿವಾಸ್, ಆನಂದ್‌ರಾವ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement