ಅಭಿಮಾನಿಗಳಿಂದ ಶಾಸಕರ ಹುಟ್ಟುಹಬ್ಬ ಆಚರಣೆ
ಚಿ.ನಾ.ಹಳ್ಳಿ: ಶಾಸಕ ಸುರೇಶ್ಬಾಬು ಅವರ ಹುಟ್ಟುಹಬ್ಬದ ಅಂಗವಾಗಿ ಶ್ರೀಕಾಲಭೈರವೇಶ್ವರ, ಕೆಂಪಮ್ಮ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯ ನೆರವೇರಿಸಿ ಮಾತನಾಡಿದ ಗ್ರಾಮಪಂಚಾಯ್ತಿ ಅಜಿ ಅಧ್ಯಕ್ಷ ಎಸ್.ಇ. ಶಶಿಧರ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ, ಅಂತಹವರ ಬಗ್ಗೆ ಯಾವಾಗಲು ಧನಾತ್ಮಕವಾಗಿ ಚಿಂತಿಸುವ ಶಾಸಕರಿಗೆ ಭಗವಂತ ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮತ್ತೋರ್ವ ಮಾಜಿ ಗ್ರಾಪಂ ಅಧ್ಯಕ್ಷ ಎಸ್.ಪಿ.ಜಗದೀಶ್ ಬಾಬು, ಬಿಚ್ಚಾಲೆ ಮಹೇಶ್,ಬಂಡೆದಯಾನಂದ್, ತೇಜು ಶೆಟ್ಟೀಕೆರೆ ಸೇರಿದಂತೆ ಅನೇಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಶ್ರೀಗಂಧರ್ವ ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆಯಲ್ಲಿಯೂ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಿ, ಪ್ರಗತಿಪರ ಚಿಂತಕ ಸುರೇಶ್ ಬಾಬು ಅವರು ಶತಾಯುಷಿಗಳಾಗಲೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಸಿ.ತೇಜಸ್ವಿ ನುಡಿದರು. ಸಂಸ್ಥೆಯ ನಿರ್ದೇಶಕರಾದ ಗೋಪಿನಾಥ್,ದಾಸ್ಕೆರೆ ಬಸವರಾಜು, ಮನೋಹರ್, ಬಾಲು ಮೊದಲಾದವರಿದ್ದರು.