ಎಂದಿಗೂ ಕಾನೂನಿನ ಉಲ್ಲಂಘನೆ ಮಾಡಬೇಡಿ: ಪಿಎಸ್ಐ ರಾಜು
ಹುಳಿಯಾರು: ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕಾದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಪಾಲನೆ ಮಾಡಬೇಕು ಹಾಗೂ ಕಾನೂನಿನ ಚೌಕಟ್ಟಿನಡಿ ಕಟ್ಟುನಿಟ್ಟಿನ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಭಯದಿಂದ ಕಾಣದೆ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು ಅತ್ಯಗತ್ಯವೆಂದು ಪಿಎಸ್ಐ ರಾಜು ಕಿವಿಮಾತು ಹೇಳಿದರು.
ಬೆಂಗಳೂರು ನಗರದ ಲೋಕಾಯುಕ್ತ ಪೊಲೀಸ್ ಇಲಾಖೆಯ ಇಸ್ಪೆಕ್ಟರ್ ಆಗಿ ಮುಂಬಡ್ತಿ ಪಡೆದ ಹುಳಿಯಾರಿನ ಪೊಲೀಸ್ ಠಾಣೆಯ ಪಿಎಸ್ಐ ರಾಜು ಅವರಿಗೆ ಠಾಣೆಯ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮ, ಜಿ.ಪಂ.ಸದಸ್ಯೆ ಮಂಜುಳಾ, ರಾದ ವೆಂಕಟಾಚಲಪತಿ ಶೆಟ್ರು, ಮೀಸೆ ರಂಗಪ್ಪ, ಬಡಗಿರಾಮಣ್ಣ, ಧನುಶ್ ರಂಗನಾಥ್ ಇತರರು ಅವರನ್ನು ಅಭಿನಂದಿಸಿದರು.