ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಿಪಟೂರು-ದುದ್ದ ರೈಲು ಮಾರ್ಗ: ಜಯಣ್ಣ ಅಭಿನಂದನೆ

Rashmi Kasaragodu
Updated On : 18 Feb 2014, 2:28 am

ತಿಪಟೂರು: ರೇಲ್ವೆ ಬಜೆಟ್ನಲ್ಲಿ ಕರ್ನಾಟಕಕ್ಕೆ ಸಾಕಷ್ಟು ನೂತನ ರೈಲು ಮಾರ್ಗಗಳು ದೊರಕಿದ್ದು, ಪ್ರಮುಖವಾಗಿ ಕಲ್ಪತರು ನಾಡು ತಿಪಟೂರು-ದುದ್ದ, ಚಳ್ಳಕೆರೆ-ಕಿಬ್ಬನಹಳ್ಳಿ ಕ್ರಾಸ್ ಮತ್ತು ಚನ್ನರಾಯಪಟ್ಟಣ ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಹೊರಟಿರುವುದು ಸೇರಿದಂತೆ ಸಾಕಷ್ಟು ರೈಲು ಮಾರ್ಗಗಳು ರಾಜ್ಯಕ್ಕೆ ಸಿಕ್ಕಿರುವುದು ಇಲ್ಲಿನ ಅಭಿವೃದ್ಧಿಗೆ ಸಹಕಾರವಾಗಲಿದೆ. ಕರ್ನಾಟಕದ ಜವಾಬ್ದಾರಿಯುತ ನಾಯಕರಾಗಿರುವ ಕೇಂದ್ರ ರೇಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಮೊದಲ ರೇಲ್ವೆ ಬಜೆಟ್ನಲ್ಲಿ ಕನ್ನಡಿಗರು ಮೆಚ್ಚುವಂತಹ ಸಾಧನೆ ಮಾಡಿದ್ದಾರೆಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್. ಜಯಣ್ಣ ತಿಳಿಸಿದ್ದಾರೆ.
 ಈ ಹಿಂದೆ ರಾಜ್ಯದ ಅನೇಕರು ರಾಜ್ಯದ ಜನರ ನಿರೀಕ್ಷೆಗೆ ಸಾಕಷ್ಟು ಸ್ಪಂದಿಸಿದ್ದು, ಅವರಂತೆಯೇ ಖರ್ಗೆಯವರೂ ಕನ್ನಡಿಗರ ಹಿತವನ್ನು ಕಡೆಗಣಿಸದೆ ಅಭಿವೃದ್ಧಿಗೆ ಮಧ್ಯಂತರ ಬಜೆಟ್ ನಡುವೆಯೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಹೊಸ ಯೋಜನೆಗಳಿಗೆ ಅವಕಾಶ ನೀಡಿರುವುದಕ್ಕೆ ಮತ್ತು ತಾಲೂಕಿನ ಜನತೆಯ ನಿರೀಕ್ಷೆಯ ತಿಪಟೂರು-ದುದ್ದ ಮತ್ತು ಚಳ್ಳಕೆರೆ-ಕಿಬ್ಬನಹಳ್ಳಿ ಕ್ರಾಸ್ ಮತ್ತು ಚನ್ನರಾಯಪಟ್ಟಣ ಮಾರ್ಗಗಳನ್ನು ಪ್ರಕಟಿಸಲು ಒತ್ತಾಸೆ ನೀಡಿರುವ ಶಾಸಕರಾದ ಕೆ. ಷಡಕ್ಷರಿಯವರಿಗೂ, ಖರ್ಗೆಯವರಿಗೂ ಜಯಣ್ಣನವರು ಅಭಿನಂದನೆ ಸಲ್ಲಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement