ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಶ್ನಿಸಿ, ವೈಚಾರಿಕತೆ ಬೆಳೆಸಿಕೊಳ್ಳಿ

Rashmi Kasaragodu
Updated On : 18 Feb 2014, 2:29 am

ಕನ್ನಡಪ್ರಭವಾರ್ತೆ೤ ತುಮಕೂರು ೤ ಫೆ.17
ಪ್ರಶ್ನಿಸಿ, ಅನುಮಾನಗಳನ್ನು ಬಗೆಹರಿಸಿಕೊಳ್ಳಿ, ವೈಚಾರಿಕತೆ ಬೆಳೆಸಿಕೊಳ್ಳಿ ಎಂದು ಶಿರಾದ ಚಿಕ್ಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಎನ್. ನಾಗಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ತುಮಕೂರಿನ ಸಮೀಪದ ಯಲ್ಲಾಪುರ ಸರ್ಕಾರಿ ಪಪೂ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದರು.
ಪ್ರಶ್ನೆಗೋಸ್ಕರ ಪ್ರಶ್ನೆ ಮಾಡಬಾರದು. ಆದರೆ ಈ ವ್ಯವಸ್ಥೆಯಲ್ಲಿ ಪ್ರಶ್ನಿಸಲೇಬೇಕಾದ ಹಲವಾರು ಪ್ರಸಂಗಗಳು ಬರುತ್ತವೆ. ಆಗ ಪ್ರಶ್ನಿಸಲೇಬೇಕಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಪ್ರಶ್ನಿಸಲು ಹಿಂಜರಿಯದೆ, ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕು. ಆಗ ಮಾತ್ರ ವೈಚಾರಿಕವಾಗಿ ಬೆಳೆಯಲು ಸಾಧ್ಯ ಎಂದರು.
ಗಿಣಿಶಾಸ್ತ್ರ, ಹಣೆಬರಹ, ಜ್ಯೋತಿಷ್ಯಶಾಸ್ತ್ರವನ್ನು ನಂಬದೆ, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಪ್ರಯತ್ನಿಸಿ. ಶ್ರಮ ಪಟ್ಟಲ್ಲಿ ಯಶಸ್ಸು ಸಾಧ್ಯ. ನಿಮ್ಮ ಹಣೆಬರಹವನ್ನು ನೀವೇ ಬರೆದುಕೊಳ್ಳಬೇಕು ಎಂದು ಹಲವು ಉದಾಹರಣೆಗಳ ಮೂಲಕ ನಾಗಪ್ಪ ವಿವರಿಸಿದರು.
ಚೆನ್ನಾಗಿ ಓದಬೇಕು: ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಚೆನ್ನಾಗಿ ಓದಬೇಕು. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗದೆ, ಈ ನೆಲದ ದೇಸಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬುದ್ದಿವಂತರಾಗಬೇಕು. ಬುದ್ದಿವಂತರಿಗೆ ಅವಕಾಶ ಇದ್ದೇ ಇರುತ್ತದೆ ಎಂದು ನಾಗಪ್ಪ ಪ್ರತಿಪಾದಿಸಿದರು.
ಮುಖ್ಯ ಅತಿಥಿ ಈರಣ್ಣ ಮಾತನಾಡಿ, ಕಾಲೇಜು ಅಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ. ಶಿಕ್ಷಕರು, ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶಕ್ಕಾಗಿ ಶ್ರಮಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಗಂಗರಾಜು ಮಾತನಾಡಿ, ಕಾಲೇಜಿನ ಮೂಲಸೌಕರ್ಯಕ್ಕಾಗಿ ಇಲಾಖೆಯ ನಿರ್ದೇಶಕರನ್ನು ಕಾಲೇಜು ಅಭಿವೃದ್ಧಿ ಸಮಿತಿಯವರ ಜತೆ ಭೇಟಿ ಮಾಡುತ್ತೇವೆ. ಕಾಲೇಜಿನ
ಅಭಿವೃದ್ಧಿ ಮತ್ತು ಎಲ್ಲ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡುವಂತೆ ಕರೆ ನೀಡಿದರು. ಉಪನ್ಯಾಸಕರಿಗೆ ಅಗತ್ಯ ಅನುಕೂಲತೆ ಕಲ್ಪಿಸುವುದು ತಮ್ಮ ಗುರಿ ಎಂದು ತಿಳಿಸಿದರು.
ಪುರಸ್ಕಾರ: ಇದೇ ಸಂದರ್ಭದಲ್ಲಿ 2012-13 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 545 ಅಂಕಗಳನ್ನು ಪಡೆದ ಮಂಗಳ ಹಾಗೂ ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ವೀರೇಂದ್ರಕುಮಾರ್, ನರಸಿಂಹಮೂರ್ತಿ, ಲೋಕೇಶ್ ಇದ್ದರು.
ಲತಾ ಸಂಗಡಿಗರು ಪ್ರಾರ್ಥಿಸಿ, ಎನ್. ಸುಧಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಯಾಜ್ ಶರೀಫ್ ಸ್ವಾಗತಿಸಿ, ಕಾಂತರಾಜ್ ವಂದಿಸಿ, ಸಣ್ಣೀರಪ್ಪ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement