ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ
ಶಿರಾ: ಶ್ರೀರಂಗನಾಥ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ತೊಗರುಗುಂಟೆ ಗ್ರಾಮದಲ್ಲಿ ಫೆ. 17 ರಿಂದ 23 ರವರೆಗೆ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯರಾದ ಕವಿತ.ವಿ. ತಿಳಿಸಿದ್ದಾರೆ. ಶ್ರೀ ಅಮ್ಮಾಜಮ್ಮ ಸಮುದಾಯ ಭವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಘದ ಅಧ್ಯಕ್ಷರಾದ ಆರ್. ನಾಗರಾಜು ಅವರು ಶಿಬಿರಕ್ಕೆ ಚಾಲನೆ ನೀಡುವರು. ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಜಿ.ಆರ್. ರಂಗನಾಥ್ ಅವರು ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಿಕೊಡುವರು. ಕಾರ್ಯಕ್ರಮದಲ್ಲಿ ಶ್ರೀ ಅಮ್ಮಾಜಮ್ಮ ದೇವಸ್ಥಾನದ ಯಜಮಾನ್ ದೊಡ್ಡೇಗೌಡರು, ಕಾರ್ಯದರ್ಶಿ ದೊಡ್ಡಯ್ಯ, ಉಪಾಧ್ಯಕ್ಷ ಮಲ್ಲಪ್ಪ, ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಲೋಕೇಶ್, ಮತ್ತಿತರರು ಹಾಜರಿರುವರು. ಶಿಬಿರಾಧಿಕಾರಿಗಳಾಗಿ ಎ. ವೆಂಕಟರಮಣ ಕಾರ್ಯ ನಿರ್ವಹಿಸುವರು.