ಇಲತೊರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಡೆಸ್ಕ್ ದಾನ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಇಲತೊರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇದೇ ಗ್ರಾಮದ ಪಾರ್ವತಮ್ಮ ವೆಂಕಟರಮಣಪ್ಪ ಅವರು ಸುಮಾರು ನಲವತ್ತು ಸಾವಿರ ರು. ಬೆಲೆ ಬಾಳುವ ಡೆಸ್ಕ್ಗಳನ್ನು ದಾನವಾಗಿ ನೀಡಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಎ. ಸೋಮಣ್ಣ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಪ್ರತಿಯೊಂದು ನೆರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಪಾರ್ವತಮ್ಮ ವೆಂಕಟರಮಣಪ್ಪ ಮುಂದೆ ಬಂದು ಶಾಲೆಗೆ ಡೆಸ್ಕ್ಗಳನ್ನು ನೀಡಿರುವುದಕ್ಕೆ ಅಭಿನಂದಿಸಿದರು. ತಾಲೂಕಿನ 50 ಸರ್ಕಾರಿ ಶಾಲೆಗಳಿಗೆ ಹಾಲು ಒಕ್ಕೂಟದಿಂದ ವಾಟರ್ ಫಿಲ್ಟರ್ಗಳನ್ನು ನೀಡುವುದಾಗಿ ತಿಳಿಸಿದರು.
ಗ್ರಾಮದ ಹಿರಿಯರಾದ ಮಮತ, ನಾಗೇಶ್, ಚನ್ನಕೇಶವಯ್ಯ, ನರಸಿಂಹಪ್ಪ ಉಪಸ್ಥಿತತರಿದ್ದರು. ಮುಖ್ಯ ಶಿಕ್ಷಕ ಎನ್. ಶಿವಕುಮಾರ್ ಸ್ವಾಗತ ಕೋರಿದರು. ಶಿಕ್ಷಕಿ ಎಸ್.ಆರ್.ರಾಜೇಶ್ವರಿ ವಂದಿಸಿದರು.