ದೂರ ಶಿಕ್ಷಣ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ತಿಪಟೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ದೂರ ಶಿಕ್ಷಣದ ಕೋರ್ಸ್ಗಳನ್ನು ಪ್ರಾರಂಭಿಸಿದೆ ಎಂದು ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಇವುಗಳ ಅವಧಿಯು 6ರಿಂದ 12 ತಿಂಗಳುಗಳಾಗಿರುತ್ತದೆ. ಸಮಗ್ರ ಕೃಷಿ ಬಗ್ಗೆ ತರಬೇತಿ 12 ತಿಂಗಳು ಶುಲ್ಕ ರೂ.1500. ಅರ್ಹತೆ 7ನೇ ತರಗತಿ ಪಾಸಾಗಿರಬೇಕು. ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿಗಳ ಕೊಯ್ಲೋತ್ತರ ನಿರ್ವಹಣೆ ಬಗ್ಗೆ 6 ತಿಂಗಳು ತರಬೇತಿ ಶುಲ್ಕ ರು.1000, ಅರ್ಹತೆ 7ನೇ ತರಗತಿ ಪಾಸಾಗಿರಬೇಕು. ಸಾವಯನ ಕೃಷಿ 12ತಿಂಗಳು ತರಬೇತಿ, ಶುಲ್ಕ ರು.200 ಓದುಬರಹ ಬಲ್ಲವರಾಗಿದ್ದರೆ ಸಾಕು. ಆಸಕ್ತಿ ಇರುವ ಅಭ್ಯರ್ಥಿ ಅಥವಾ ರೈತರು ರು.50 ನಗದು, ಪೋಸ್ಟಲ್ ಆರ್ಡರ್ ಅಥವಾ, ಡಿಡಿಯನ್ನು ಹಣಕಾಸು ನಿಯಂತ್ರಣಾಧಿಕಾರಿಗಳು, ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು ಇವರಿಗೆ ಸಲ್ಲಿಸಿ ಸಂಯೋಜಕರು, ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ, ಬೆಂಗಳೂರು ಇವರಿಂದ ಅರ್ಜಿಗಳನ್ನು ಪಡೆಯಬಹುದು.