ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪರಮಶಿವಯ್ಯ ವರದಿ ಜಾರಿಗೆ ಕರವೇ ಒತ್ತಾಯ

Rashmi Kasaragodu
Updated On : 19 Feb 2014, 1:31 am

ತಿಪಟೂರು: ನೆರರಾಜ್ಯಗಳ ತಕರಾರಿಲ್ಲದ ನಮ್ಮ ರಾಜ್ಯದಲ್ಲೇ ಹುಟ್ಟಿ, ನಮ್ಮ ರಾಜ್ಯದಲ್ಲೇ ಕೊನೆಗೊಳ್ಳುವ ನದಿ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹಾಯಿಸಲು ಯೋಗ್ಯತೆಯಿಲ್ಲದ ಸರ್ಕಾರಗಳು, ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶದ ಜನರ ವಿರೋಧ ಕಟ್ಟಿಕೊಳ್ಳುವ ಭಯದಿಂದ ಬರಪೀಡಿತ ಜನರ ಸಮಾಧಿಯ ಮೇಲೆ ಆಡಳಿತ ಸೌಧವನ್ನು ಕಟ್ಟಿಕಟ್ಟಲು ಹೊರಟಿರುವ ರಾಜಕಾರಣಿಗಳ ಹುನ್ನಾರ ಸರಿಯಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಆರ್. ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ತಜ್ಞರಾಜ ಜಿ.ಎಸ್.ಪರಮಶಿವಯ್ಯನವರ ವರದಿ ಯಥಾವತ್ ಜಾರಿಯಾದರೆ ಬರಪೀಡಿತ ಪ್ರದೇಶದ ಕೆರೆ ಕಟ್ಟೆಗಳಲ್ಲೂ ನೀರಿನಿಂದ ಸಮೃದ್ಧವಾಗುತ್ತದೆ. ಇಂತಹ ಯೋಜನೆ ಜಾರಿಗೊಳಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟದ ಕರಾವಳಿಯ ಜನರ ವಿರೋಧದಿಂದ ತಮ್ಮ ತಮ್ಮ ಪಕ್ಷಗಳಿಗೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕಾಗಿ ನರಿ ಬುದ್ಧಿಯ ರಾಜಕಾರಣಿಗಳು ಎತ್ತಿನ ಹೊಳೆ ಎಂಬ ಅಪ್ರಯೋಜಕ ಯೋಜನೆಗೆ ಚಾಲನೆ ನೀಡುವುದು ಸರಿಯಲ್ಲ. ಇದರಿಂದ ಸರ್ಕಾರದ ಹಣ ವ್ಯಯವಾಗುವ ಜೊತೆಗೆ ಅಧಿಕಾರ ಶಾಹಿಗಳ ತಿಜೋರಿ ತುಂಬಿಸಬಹುದೇ ಹೊರತು ಕೆರೆಗಳಿಗೆ ನೀರು ತುಂಬಿಸಲಂತೂ ಸಾಧ್ಯವಿಲ್ಲ. ಅದರಲ್ಲೂ ತುಮಕೂರು ಜಿಲ್ಲೆಗೆ ಈ ನೀರು ಕೇವಲ ಮರೀಚಿಕೆ ಅಷ್ಟೇ. ಹಾಗಾಗಿ ಈ ಎತ್ತಿನ ಹೊಳೆ ಯೋಜನೆ ಕೈಬಿಟ್ಟು ಬರಪೀಡಿತ ಪ್ರದೇಶಗಳ ಸಮೃದ್ಧತೆಗೆ ಪರಮಶಿವಯ್ಯ ವರದಿಯನ್ನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.  ಒಂದು ವೇಳೆ ಈ ಯೋಜನೆಯನ್ನು ಜಾರಿಗೊಳಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ವಿಜಯಕುಮಾರ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement