ಶಿಕ್ಷಣದಲ್ಲಿ ತಾರತಮ್ಯ: ಶ್ರೀಗಳ ವಿಷಾದ
ಚಿಕ್ಕನಾಯಕನಹಳ್ಳಿ: ಶಿಕ್ಷಣವೆಂದರೆ ಹುಟ್ಟಿನಿಂದಲೇ ಮನುಷ್ಯನಲ್ಲಿರುವ ಜ್ಞಾನಭಂಡಾರವನ್ನು ಹೊರಪ್ರಪಂಚಕ್ಕೆ ತೆರೆದಿಡುವುದು ಎಂದು ತಮ್ಮಡೀಹಳ್ಳಿ ವಿರಕ್ತ ಮಠಾಧೀಶರಾದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ನುಡಿದರು. ಅವರು ತಾಲೂಕಿನ ತರಬೇನಹಳ್ಳಿಯಲ್ಲಿರುವ ಆಕ್ಸ್ಫರ್ಡ್ ಇಂಟರ್ ನ್ಯಾಷನಲ್ ಆಂಗ್ಲಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಯಾವ ಶಿಕ್ಷಣ ಜನಸಾಮಾನ್ಯರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೋ, ಯಾವುದು ಮನುಷ್ಯನಿಗೆ ಚಾರಿತ್ಯಬಲ, ಆತ್ಮಬಲ, ಸೇವಾತತ್ಪರತೆ ಇವುಗಳನ್ನು ಒದಗಿಸುವುದಿಲ್ಲವೋ ಅದು ಶಿಕ್ಷಣವಾಗುವುದಿಲ್ಲ. ವಿದ್ಯಾಭ್ಯಾಸವೆಂದರೆ ಮಕ್ಕಳ ತಲೆಗೆ ತುಂಬುವ ಮಾಹಿತಿಗಳ ಮೊತ್ತವಲ್ಲ. ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು ಎಂದರು.