ಸಮುದಾಯ ಭವನ ಉದ್ಘಾಟನೆ
ಕ.ಪ್ರ. ವಾರ್ತೆ ಮಧುಗಿರಿ ಫೆ.19
ಮಧುಗಿರಿಯಲ್ಲಿ ಬಲಿಜ ಸಮಾಜದ ವತಿಯಿಂದ ನಿರ್ಮಿಸಿರುವ ಎಂ.ಎಸ್. ರಾಮಯ್ಯ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯದ ಗೃಹ ಪ್ರವೇಶ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಎಂ.ಆರ್.
ಸೀತಾರಾಮ್ ನೇತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಜನಾಂಗದ ಮುಖಂಡರಾದ ಆಡಿಟರ್ ರಾಮಚಂದ್ರಪ್ಪ, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಮಾಜಿ ಅಧ್ಯಕ್ಷ ಕೆ. ಪ್ರಕಾಶ್, ಸದಸ್ಯ ಗೋಪಿನಾಥ್, ಮುಖಂಡ ಆರ್.ಎಲ್.ಎಸ್.ರಮೇಶ್, ಎಂ.ಎಸ್. ಶಂಕರನಾರಾಯಣ, ಎಂ.ಆರ್.ಜಗನ್ನಾಥ್, ಉಮೇಶ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.