ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಸಲಹೆ

Rashmi Kasaragodu
Updated On : 20 Feb 2014, 2:27 am

ಕ.ಪ್ರ. ವಾರ್ತೆ    ತುಮಕೂರು    ಫೆ.19
ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಡಿ.ಎಸ್. ಶಿವಶಂಕರ್ ಕರೆ ನೀಡಿದರು.
ಅವರು ಮಾಯಸಂದ್ರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ತುರುವೇಕೆರೆ ತಾಲೂಕು ಪ್ರೌಢಶಾಲಾ ಗಣಿತ ವಿಜ್ಞಾನ ಸಹ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸರ್.ಸಿ.ವಿ ರಾಮನ್ ಅವರ ಜೀವನ ಮತ್ತು ಸಾಧನೆ ಕುರಿತ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸರ್.ಸಿ.ವಿ ರಾಮನ್ ಅವರು ಒಬ್ಬ ಪ್ರಸಿದ್ಧ ವಿಜ್ಞಾನಿಯಾಗಿದ್ದು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಡವನಘಟ್ಟ ಪಂಚಾಯ್ತಿಯ ಸಿ.ಆರ್.ಪಿ ಶಿವಣ್ಣನವರು ಮಕ್ಕಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಮಾಜಕ್ಕೆ ಪರಿಸರ ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕ ಶಿವಣ್ಣ ಇಂತಹ ವಿಶೇಷ ಸಂದರ್ಭಗಳಲ್ಲಿ ಮಕ್ಕಳು ವಿಜ್ಞಾನಿಗಳ ಬಗ್ಗೆ ಪ್ರಶಂಸಾ ಮನೋಭಾವ ಬೆಳೆಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಅಭಿಪ್ರಾಯ ಪಟ್ಟರು.
ಗಣಿತ ವಿಜ್ಞಾನ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಚೀಂದ್ರನ್, ಖಜಾಂಚಿ ಶಿವಶಂಕರ್, ಭಾಗವಹಿಸಿದ್ದರು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವಸಂತ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಯುವ ಜಾಗೃತಿ ಸೈಕಲ್ ಜಾಥಾ

ಕ.ಪ್ರ. ವಾರ್ತೆ    ತುಮಕೂರು    ಫೆ.19
ವ್ಯಾಪ್ತಿ ಮೀರಿದ ವೈಯಕ್ತಿಕ ಹಿತಾಸಕ್ತಿ, ಆಡಳಿತದ ಬಗ್ಗೆ ನಿರಾಸಕ್ತಿ, ಸರ್ಕಾರಿ ವ್ಯವಸ್ಥೆಯ ಬಗ್ಗೆ ನಕಾರಾತ್ಮಕ ಧೋರಣೆ, ಪರಿಸರದ ಬಗೆಗಿನ ನಿರ್ಲಕ್ಷತೆ ಇನ್ನು ಮುಂತಾದ ವಿಷಯಗಳು ನಮ್ಮ ಸಾಮಾಜಿಕ ಹಾಗೂ ವ್ಯಕ್ತಿಗತ ಬದುಕನ್ನು ಅಸಹನೀಯವಾಗಿಸಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಯುವಜನರು ಸಂಘಟಿತವಾಗಿ ಕಾರ್ಯೋನ್ಮುಖರಾಗಬೇಕು ಎಂದು ಯುವಜನ ಕಾರ್ಯಕರ್ತ ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.
ಅವರು ಗುಬ್ಬಿ ತಾಲೂಕಿನ ತಾಳೆಕೊಪ್ಪ ರಂಗನಹಳ್ಳಿಯ ಬೆಳಕು ಯುವ ಸಂಘ ಮತ್ತು ಸಿ.ಎಮ್.ಸಿ.ಎ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ  ಯುವ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ನಿಟ್ಟಿನಲ್ಲಿ ಬೆಳಕು ಯುವ ಸಂಘ ಮತ್ತು ಸಿ.ಎಮ್.ಸಿ.ಎ ತುಮಕೂರು ಜಿಲ್ಲೆಯಲ್ಲಿ ನಡೆಸಿರುವ ಇಂತಹ ಪ್ರಯೋಗ ನಿಜಕ್ಕೂ ಮಹತ್ವದ್ದಾಗಿದೆ ಎಂದರು.
ಜಾಥಾಕ್ಕೆ ಅಂಕಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆದ ಕಾಂತರಾಜು ಟಿ.ಸಿ.ರವರು ಚಾಲನೆ ನೀಡಿದರು.
ಜಾಥಾವು ರಂಗನಹಳ್ಳಿ ಗೇಟ್ ನಿಂದ ಪ್ರಾರಂಭವಾಗಿ ತಾಳೆಕೊಪ್ಪ, ಕಾಲೋನಿ, ಹನುಮೇನಹಳ್ಳಿ, ರಂಗನಹಳ್ಳಿ ಮತ್ತು ಕಲ್ಗುಡಿಯನ್ನು ತಲುಪಿತು. ಆಯಾ ಹಳ್ಳಿಯಲ್ಲಿನ ಯುವಜನರನ್ನು ಜಾಥಾದಲ್ಲಿ ಸೇರಿಸಿಕೊಳ್ಳುವುದಲ್ಲದೆ ಅವರ ಕೈಗೆ ಪಂಚ ವರ್ಣದ ಕೈಪಟ್ಟಿಯನ್ನು ಕಟ್ಟಿ ಜಾಥಾದ ಉದ್ದೇಶಗಳನ್ನು ವಿವರಿಸಲಾಯಿತು ಹಾಗೂ ಗ್ರಾಮಗಳ ಅಭಿವೃದ್ಧಿಗೆ ಜೊತೆಗೂಡುವಂತೆ ವಿನಂತಿಸಲಾಯಿತು.
ಕೆ.ಎನ್. ರೂರಲ್ ಹೈಸ್ಕೂಲ್ನ ದೈಹಿಕ ಶಿಕ್ಷಕ ಮಂಜುನಾಥ್, ಬೆಳಕು ಯುವ ಸಂಘದ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಉಮೇಶ್, ನಿರ್ದೇಶಕರಾದ ಶಶಿಧರ್, ಗೌತಮ್, ಹೇಮಂತ್, ಕೇಶವ್ ಇನ್ನಿತರೆ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement