ಎಚ್.ಇ.ರಮೇಶ್ ಅಧ್ಯಕ್ಷ
ತಿಪಟೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಿಪಟೂರು ಶಾಲೆಗೆ ಗೌರವಾಧ್ಯಕ್ಷರಾಗಿ ಎಚ್.ಬಿ.ಸಿದ್ದರಾಮಣ್ಣ, ಅಧ್ಯಕ್ಷರಾಗಿ ಎಚ್.ಇ.ರಮೇಶ್ ಮತ್ತು ಕಾರ್ಯಾಧ್ಯಕ್ಷರಾಗಿ ಜಿ.ಸಿ.ಕುಮಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ. ಇವರ ಆಯ್ಕೆಯನ್ನು ಸಂಘದ ಬೈಲಾ ಪ್ರಕಾರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಈ ನಡುವೆ ಕೆಲವು ಶಿಕ್ಷಕರು ಕಾನೂನು ಬಾಹಿರವಾಗಿ ಶಿಕ್ಷಕರ ಸಂಘದ ಅಧ್ಯಕ್ಷರು ಎಂದು ಹೇಳಿಕೊಳ್ಳುತ್ತಿದ್ದು, ಅವರ ಆಯ್ಕೆ ಕಾನೂನು ಬಾಹಿರವಾಗಿದೆ ಎಂದೂ ತಾಲೂಕು ಶಿಕ್ಷಕರ ಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಎಚ್.ಇ. ರಮೇಶ್ ಅವರೇ ಅಧಿಕೃತ ಅಧ್ಯಕ್ಷರೆಂದು ಸಂಘ ತಿಳಿಸಿದೆ.