ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತೆಂಗಿನ ಮರಕ್ಕೆ ಪರಿಹಾರ ನೀಡಲು ಆಗ್ರಹ

Rashmi Kasaragodu
Updated On : 21 Feb 2014, 1:22 am

ಚಿಕ್ಕನಾಯಕನಹಳ್ಳಿ: ಬರ ಮತ್ತು ಅನಾವೃಷ್ಟಿಯ ಕಾರಣದಿಂದ ಒಣಗಿ ಹಾಳಾಗಿರುವ ತೆಂಗಿನ ಮರಗಳಿಗೆ ಪರಿಹಾರ ನೀಡಬೇಕೆಂದು ಶ್ರೀಅಭಯಾಂಜನೇಯ ಸ್ವಾಮಿ ರೈತಶಕ್ತಿ ಗುಂಪಿನ ಸಂಯೋಜಕರಾದ ಎಸ್.ಕೆ.ರಾಮಲಿಂಗಯ್ಯ ಮತ್ತು ಉಪಸಂಯೋಜಕರಾದ ಎಸ್.ಎಂ. ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ನಂಜುಂಡಪ್ಪ ವರದಿಯಲ್ಲೂ  ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಲ್ಲಿ ತೆಂಗಿನ ಬೆಳೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟಂಬಗಳಿವೆ. ಕಲ್ಪತರು ನಾಡೆಂಬ ಖ್ಯಾತಿಗೆ ಒಳಗಾಗಿದ್ದರೂ ನಮ್ಮ ಪ್ರಾಂತ್ಯದಲ್ಲಿ, ಅನಾವೃಷ್ಟಿ ಹಾಗೂ ಕಪ್ಪುತಲೆ ರೋಗದ ಕಾರಣಗಳಿಂದ ತೆಂಗಿನ ಮರಗಳು ದಿನೇದಿನೇ ಒಣಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಾಲೂಕು ತೋಟಗಾರಿಕಾ ಇಲಾಖೆ ಮೂರ್ನಾಲ್ಕು ಬಾರಿ ತಾಲೂಕಿನಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ರೈತರ ಹೆಸರು ಮತ್ತು ಆಗಿರುವ ಹಾನಿಯ ಅಂದಾಜನ್ನು ಪಟ್ಟಿಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿವೆ. ಇದಾಗಿ 6 ತಿಂಗಳು ಕಳೆದರೂ ಇದುವರೆಗೂ ಸರ್ಕಾರ ರೈತರಿಗೆ ಪರಿಹಾರ ನೀಡದಿರುವುದು ವಿಪರ್ಯಾಸವಾಗಿದೆ. ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ತೋಟಗಾರಿಕೆ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ ಅವರು ಒಂದು ಮರಕ್ಕೆ 120 ರು. ಪರಿಹಾರ ಘೋಷಿಸಿದಾಗ ರೈತ ಸಂಘದ ಪುಟ್ಟಣ್ಣಯ್ಯನವರು, ಸರ್ಕಾರ್ಕಕೆ ನಾಚಿಕೆಯಾಗಬೇಕು. ರೈತರೇನು ನಿಮ್ಮ ಬಳಿ ಭಿಕ್ಷೆ ಬೇಡಲು ಬಂದಿಲ ಅವರಿಗೆ ನ್ಯಾಯ ಒದಗಿಸಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement