ಧರ್ಮಪಾಲ್ ಯಾದವ್ರಿಂದ ಪೊಲೀಸರಿಗೆ ದೂರು
ಪಾವಗಡ: ನನ್ನ ವಿರುದ್ಧ ವಿನಾಕಾರಣ ಪಿತೂರಿ ನಡೆಸಿ ನನ್ನ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಇಲ್ಲಿನ ಮುಖಂಡ ಕೆ.ವೈ. ಧರ್ಮಪಾಲ್ ಯಾದವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ತೇಜೋವಧೆ ಮಾಡಲು ಹೊರಟ ಕೆಲ ಸಂಘಟನೆಗಳ ಮುಖಂಡರಿಂದ ನನ್ನ ಕುಟುಂಬಕ್ಕೆ ಪ್ರಾಣಾಪಾಯವಿದ್ದು ರಕ್ಷಣೆ ಕೋರಿ ಗೃಹ ಸಚಿವಾಲಯ ಸೇರಿದಂತೆ ಐಜಿಪಿ ಕಚೇರಿ ಮತ್ತು ಜಿಲ್ಲಾ ಎಸ್ಪಿ ಅವರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.