ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೂಜನೀಯ ಗೋಸಂಪತ್ತನ್ನು ರಕ್ಷಿಸಿ: ಶಾಸಕ

Rashmi Kasaragodu
Updated On : 21 Feb 2014, 1:22 am

ಚಿಕ್ಕನಾಯಕನಹಳ್ಳಿ: ಮಾತುಬಲ್ಲ ಮಾನವನಿಗಿಂತ ಮಾತುಬಾರದ ಮೂಕಪ್ರಾಣಿಗಳ ವೇದನೆಯನ್ನರಿತು, ಚಿಕಿತ್ಸೆ ನೀಡುವುದು ನಿಜವಾದ ಮಾನವೀಯತೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ನುಡಿದರು.
ಶನಿವಾರ ತಾಲೂಕಿನ ಗೋಡೇಕೆರೆ ಗ್ರಾಮದಲ್ಲಿ ಪಶುವೈದ್ಯ ಇಲಾಖೆ ಮತ್ತು ಗೋಡೇಕೆರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ, ಮಿಶ್ರತಳಿ ರಾಸುಗಳ ಪ್ರದರ್ಶನ ಹಾಗೂ ಕಾಲುಬಾಯಿ ಜ್ವರಕ್ಕೆ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೈದ್ಯರಿಗಿಂತ ಸಾಕಿದ ಯಜಮಾನನಿಗೆ ಪ್ರಾಣಿಗಳ ನೋವು ಬೇಗ ಅರ್ಥವಾಗುತ್ತದೆ. ಆದ್ದರಿಂದ  ರಾಸುಗಳ ಚಲನವಲನವನ್ನರಿತು ಕೂಡಲೇ ವೈದ್ಯರಿಂದ ಚಿಕಿತ್ಸೆ ಮಾಡಿಸಬೇಕು. ಗೋವು ನಮಗೆ ಬಹಳ ವಿಧದಲ್ಲಿ ಉಪಕಾರಿಯಾಗಿದೆ. ನಮಗೆ ಅದು ಪೂಜನೀಯ ಆಗಿರುವುದರಿಂದ ಆಕಳುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಆಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಪಂ ಮಾಜಿ ಅಧ್ಯಕ್ಷ ಎಂ.ಎಂ. ಜಗದೀಶ್ ಮಾತನಾಡುತ್ತಾ, ಹೈನುಗಾರಿಕೆ ರೈತನ ಜೀವನಾಡಿ ಮತ್ತು ಬದುಕಿನ ಅವಿಭಾಜ್ಯ ಅಂಗ. ಮಧ್ಯಮ ಕುಟುಂಬದ ಬದುಕಿನ ಚೈತನ್ಯವಾಗಿದೆ. ಅಡಕೆ, ತೆಂಗಿನಿಂದ ವರ್ಷಕ್ಕೊಮ್ಮೆ ಆದಾಯ ಕಾಣುವ ನಾವು ಹೈನುಗಾರಿಕೆಯಲ್ಲಿ ವಾರಕ್ಕೊಮ್ಮೆ ಆದಾಯ ಕೈಸೇರುತ್ತದೆ. ಈಭಾಗಕ್ಕೆ ಪಶು ಆಸ್ಪತ್ರೆಯ ಅವಶ್ಯಕತೆಯಿದ್ದು, ಕಳೆದ ಸರ್ಕಾರದ ಮುಂದೆ ಮನವಿ ಮಾಡಲಾಗಿ, ರಾಜ್ಯದಲ್ಲಿರುವ 1800 ಪಶುವೈದ್ಯ ಆಸ್ಪತ್ರೆಗಳಲ್ಲಿರುವ ವೈದ್ಯರ ಸಂಖ್ಯೆ ಕೇವಲ 600 ಜನ ಮಾತ್ರ. ಬರೀ ಆಸ್ಪತ್ರೆ ತೆರೆದರೆ ನಿರುಪಯುಕ್ತ ಎಂದು ಸಚಿವರು ಈ ಭಾಗಕ್ಕೆ ಆಸ್ಪತ್ರೆ ತೆರೆಯಲು ಆಸಕ್ತಿ ವಹಿಸಲಿಲ್ಲ. ಆದರೆ ಸರ್ಕಾರ ಇತ್ತೀಚೆಗೆ   5000 ರಾಸುಗಳಿಗೊಂದು ಆಸ್ಪತ್ರೆ
ತೆರೆಯುವ ಬಗ್ಗೆ ನಿಯಾಮಾವಳಿ ರೂಪಿಸಿದ್ದು, ನಿಯಮಾವಳಿಯನ್ನು ಬದಿಗಿಟ್ಟು ಮಾನವೀಯ ನೆಲೆಯಲ್ಲಿ ಶಾಸಕರು ಇಲ್ಲಿಗೆ ಶೀಘ್ರವಾಗಿ ಪಶು ಆಸ್ಪತ್ರೆ ಮಂಜೂರು ಮಾಡಿಸಬೇಕು ಎಂದು ಆಗ್ರಹಿಸಿದರು. ಸಾಧನೆ ಮಾಡುವ ವ್ಯಕ್ತಿಯ ಬೆನ್ನು ತಟ್ಟಿದರೆ ಅದರಿಂದ ಉತ್ಸಾಹ ಹೆಚ್ಚುತ್ತದೆ. ಆದ್ದರಿಂದ ಉತ್ತಮ ರಾಸುಗಳಿಗೆ ಬಹುಮಾನ ನೀಡುತ್ತಿರುವುದು ಶ್ಲಾಘನೀಯ ಎಂದರು.
Ú ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ವಹಿಸಿದ್ದರು. ಪಶುವೈದ್ಯ ಇಲಾಖೆಯ ಡಾ.ಶಶಿಕುಮಾರ್, ಡಾ. ಕಾಂತರಾಜು, ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement