ಶ್ರೀಗಳು ಸರ್ಕಾರಕ್ಕಿಂತ ಮಿಗಿಲು: ಪ್ರಸಾದ್
ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮಿಗಳ ಸೇವೆ ಸರ್ಕಾರದ ಸೇವೆಗಿಂತ ಮಿಗಿಲು. ಅವರ ಸಾಧನೆ ಸರ್ಕಾರದ ಸಾಧನೆಯನ್ನು ಮೀರಿಸಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಪ್ರಶಂಶಿಸಿದರು.
ದುರ್ಬುದ್ದಿ ಹೋಗುತ್ತೆ:ಚೆನ್ನಿಗಪ್ಪ
ಸಿದ್ಧಗಂಗಾ ಮಠಕ್ಕೆ ಬಂದರೆ ದುರ್ಬುದ್ಧಿ ಹೋಗಿ, ಧರ್ಮಬುದ್ಧಿ ಬರುತ್ತೆ. ಅಂದು ಕೊಂಡಿದ್ದು ಆಗುತ್ತೆ. ಮಾಡಿದ ಪಾಪ ಕಾರ್ಯಗಳು ಕಳೆಯುತ್ತವೆ ಎಂದು ಮಾಜಿ ಸಚಿವ ಚೆನ್ನಿಗಪ್ಪ ಪ್ರತಿಪಾದಿಸಿದರು.
ಗ್ರಾಮೀಣರಿಗೆ ಒತ್ತು: ಟಿ.ಬಿ. ಜಯಚಂದ್ರ
ಸಿದ್ಧಗಂಗಾ ಮಠ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಿದೆ. ಹಸಿದ ಮಕ್ಕಳಿಗೆ ಅನ್ನ, ಶಿಕ್ಷಣ ದಾಸೋಹ ನೀಡುವ ಮೂಲಕ ಗ್ರಾಮೀಣರ ಅಭಿವೃದ್ಧಿಗೆ ಸಿದ್ದಗಂಗಾಶ್ರೀಗಳು ಅಪಾರವಾಗಿ ಶ್ರಮಿಸಿದ್ದಾರೆ. ಸರ್ಕಾರ ಯಾವತ್ತೂ ಮಠದ ಜತೆಯಿರುತ್ತದೆ. ಸಂಪನ್ಮೂಲದ ಕೊರತೆಯಿದೆ. ಭಕ್ತರ ಸಹಾಯ ಮುಖ್ಯವಾಗಿದೆ ಎಂದು ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.