ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಿದ್ದಗಂಗಾ ಶ್ರೀಗಳ ಜನ್ಮದಿನೋತ್ಸವ

Rashmi Kasaragodu
Updated On : 21 Feb 2014, 1:25 am

ಲವಲವಿಕೆಯಿಲ್ಲದ ಬಿಎಸ್ವೈ
ತುಮಕೂರು: ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮಿಗಳ 106 ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲವಲವಿಕೆಯಿಲ್ಲದಂತೆ ಕಂಡು ಬಂದರು.
ಸಮಾರಂಭ ಆರಂಭವಾಗುವ ಬೆಳಗಿನ 10.30 ಕ್ಕೆ ಸರಿಯಾಗಿ ಮೊದಲಿಗರಾಗಿ ವೇದಿಕೆಗೆ ಆಗಮಿಸಿದ ಬಿಎಸ್ ವೈ, ಆಗ ತಾನೆ ವೇದಿಕೆಗೆ ಆಗಮಿಸಿದ ತಮ್ಮ ಕಟ್ಟಾ  ಬೆಂಬಲಿಗ, ತುಮಕೂರು ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು ಅವರ ಜತೆ ಕೆಲ ಹೊತ್ತು ಮಾತನಾಡಿದರು. ನಂತರ ಓದಿನಲ್ಲಿ ಮಗ್ನರಾದರು. ಇದು ಕಾರ್ಯಕ್ರಮ ಮುಗಿಯುವವರೆಗೂ ಮುಂದುವರೆದಿತ್ತು.
ಇದೇ ವೇಳೆ ಬೃಹತ್ ನಂದಿ ವಿಗ್ರಹ ಉದ್ಘಾಟಿಸಿದ ಬಿಎಸ್ವೈ  ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದವರು ಕಾಣಿಕೆ ನೀಡಿದರೆ ಮಠ 10 ಪಟ್ಟು ಬೆಳೆಯಲು ಸಾಧ್ಯ ಎಂದರು. 21 ನೇ ಶತಮಾನ ಭಾರತೀಯರ ಶತಮಾನ. ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿಯಿರುವ ದೇಶ ನಮ್ಮದು. ಆದರೆ ನಮ್ಮ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ ವಿಷಾದಿಸಿದರು.


ಸಿದ್ಧಗಂಗಾ ಶ್ರೀಗಳ ಜೀವನೋತ್ಸಾಹ ಶ್ಲಾಘನೀಯ: ಶ್ರೀ
ತುಮಕೂರು: 106 ರ ಇಳಿವಯಸ್ಸಿನಲ್ಲೂ ಜೀವನೋತ್ಸವ ಉಳಿಸಿಕೊಂಡು, ಸಮಾಜ ಸೇವೆ ಮಾಡುತ್ತಿರುವ ಸಿದ್ಧಗಂಗಾ ಶ್ರೀಗಳ ಸೇವೆ ಪ್ರಶಂಸನೀಯ ಎಂದು ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು. 39 ನೇ ವಯಸ್ಸಿನಿಂದಲೇ ದೇಶದ ಚಿಂತನೆ ನಡೆಸಿದ ಸಿದ್ಧಗಂಗಾ ಶ್ರೀಗಳ ತ್ಯಾಗ, ಮಾರ್ಗದರ್ಶನ ನಿರಂತರವಾಗಿರಲಿ ಎಂದು ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement