ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

5 ದಿನಗಳ ತಾಂತ್ರಿಕ ಕಾರ್ಯಾಗಾರಕ್ಕೆ ಚಾಲನೆ

Rashmi Kasaragodu
Updated On : 22 Feb 2014, 1:59 am

ತುಮಕೂರು: ವಿದ್ಯುತ್ ಸರಬರಾಜಿನಲ್ಲಿ ಆಗುವ ನಷ್ಟ ನಿಯಂತ್ರಿಸಲು ಪ್ಯಾಕ್ಚ್ಸ್ ಉಪಕರಣಗಳಿಂದ ಸಾಧ್ಯ ಎಂದು ಬೆಂಗಳೂರು ತಾಂತ್ರಿಕ ವಿಭಾಗದ ವ್ಯವಸ್ಥಾಪಕ  ಸೇತುರಾಮನ್ ಗಣೇಶನ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಎಸ್‌ಎಸ್‌ಐಟಿ ವಿದ್ಯುನ್ಮಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ 5 ದಿನಗಳ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದದರು.
ವಿದ್ಯುತ್ ಸರಬರಾಜಿನಲ್ಲಿ ಆಗುವ ನಷ್ಟಗಳನ್ನು ನಿಯಂತ್ರಿಸಲು ವಿವಿಧ ರೀತಿಯ ಕ್ರಮಗಳ ಬಗ್ಗೆ ಮಾತನಾಡಿ, ಪ್ಯಾಕ್ಟ್ಸ್ ಕುರಿತು ವಿಶೇಷವಾಗಿ ಉಪನ್ಯಾಸ ನೀಡಿದರು.
ವಿದ್ಯುತ್ ಬಳಕೆ, ಉತ್ಪಾದನೆ ಕುರಿತಂತೆ ವಿವರಿಸಿ, ವಿದ್ಯುತ್ ನಷ್ಟ, ನಿಯಂತ್ರಣ ಕುರಿತಂತೆ ಸಂಶೋಧನೆಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಸ್‌ಎಸ್‌ಐಟಿ ವಿದ್ಯುತ್ ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಬಿ. ರಾಜೇಶ್ ಕಾಮತ್ ಸ್ವಾಗತಿಸಿದರು. ಪ್ರೊ. ಬಿ.ಎಸ್. ಯೋಗಾನಂದ್, ಪ್ರೊ. ಜಿ.ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement