'ಕುಷ್ಠರೋಗ ನಿವಾರಣೆಗೆ ಸೂಕ್ತ ಚಿಕಿತ್ಸೆ ಅಗತ್ಯ'
ಚಿಕ್ಕನಾಯಕನಹಳ್ಳಿ: ಚಿಕಿತ್ಸೆ ಪಡೆಯದೆ ಕುಷ್ಠರೋಗ ವಾಸಿಯಾಗುವುದಿಲ್ಲ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕಚೇರಿ ಮೂಲಗಳು, ಇದೊಂದು ಸಾಂಕ್ರಾಮಿಕ ರೋಗವಾಗಿದು ್ದಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ತಾಮ್ರ ಬಣ್ಣದ ಕಡಿತ, ನವೆ ಇಲ್ಲದ ಮಚ್ಚೆಗಳೇ ಕುಷ್ಠರೋಗದ ಲಕ್ಷಣಗಳಿರಬಹುದು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಕ್ರಿಮಿಯಿಂದ ಬರುತ್ತದೆ. ಕುಷ್ಠರೋಗ ಪಾಪಕರ್ಮಗಳಿಂದ ಮತ್ತು ವಂಶಪಾರಂಪರ್ಯದಿಂದ ಬರುವ ಖಾಯಿಲೆಯಲ್ಲ. ಜನ್ಮತಃ ಯಾರೂ ಕುಷ್ಠರೋಗಿಗಳಾಗಿ ಹುಟ್ಟುವುದಿಲ್ಲ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು. ಕುಷ್ಠರೋಗದ ಲಕ್ಷಣಗಳು ಕಂಡು ಬಂದ ಮೇಲೆ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸಿದರೆ ಅಂಗವಿಕಲತೆ ಉಂಟಾಗಬಹುದೆ ಹೊರತು ರೋಗದಿಂದಾಗಿ ಅಂಗವಿಕಲತೆ ಬರುವುದಿಲ್ಲ. ಕುಷ್ಠರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಬಹುದು ಎಂದು ತಾಲೂಕು ವೈದ್ಯಾಧಿಕಾರಿಗಳ ಕಚೇರಿ ತಿಳಿಸಿದೆ.