'ಕ್ರೀಡೆಯಲ್ಲಿ ಸೋಲು-ಗೆಲವು ಸಹಜ'
ಮಧುಗಿರಿ: ಕ್ರೀಡಾಪಟುಗಳು ಸೋಲು-ಗೆಲವನ್ನು ಸಮಾನಾಗಿ ಸ್ವೀಕರಿಸಿ ಕ್ರೀಡಾ ಮನೋಭಾದಿಂದ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಡಿವೈಎಸ್ಪಿ ಗುರುಸ್ವಾಮಿ ಕಿವಿಮಾತು ಹೇಳಿದರು.
ಮಧುಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಟಿ.ವಿ.ವೆಂಕಟಸ್ವಾಮಿ ಪ್ರಥಮದರ್ಜೆ ಕಾಲೇಜು, ಶಿಕ್ಷಣ ಮಹಾವಿದ್ಯಾಲಛಯ, ಎಂಇಎಸ್ ಪಾಲಿಟೆಕ್ನಿಕ್ ಹಾಗೂ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಗುಂಡು ಎಸೆಯುವ ಮೂಲಕ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಸೋಲೇ ಗೆಲವಿನ ಸೋಪಾನ, ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ ಓದಿನಷ್ಟೆ ಕ್ರೀಡೆ ಕೂಡ ಮುಖ್ಯ,ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾಸಂಸ್ಥೆ ಸದಸ್ಯ ಡಿ.ಜಿ.ಶಂಕರನಾರಾಯಣಶಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತಾಧಿಕಾರಿ ಬಿ.ಎಂ.ಪ್ರೇಮನಾಥ್ ಮತ್ತಿತರರು ಮಾತನಾಡಿದರು. ಸೋಮಶೇಖರ್, ನಾಗರಾಜು, ಹನುಮಂತರಾಯಿಡು, ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.