ಜಾನಪದ-ಪೌರಾಣಿಕ ಗ್ರಾಮೀಣ ನಾಟಕೋತ್ಸವಕ್ಕೆ ಚಾಲನೆ
ಮಧುಗಿರಿ: ಇಂದಿನ ದೃಶ್ಯ ಮಾಧ್ಯಮಗಳ ಅಬ್ಬರದಲ್ಲೂ ರಂಗಭೂಮಿ ತನ್ನ ಸ್ವಂತಿಕೆಯನ್ನು ಜೀವಂತವಾಗಿಟ್ಟುಕೊಂಡಿದೆ ಎಂದು ಕೊಡಿಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಅರುಣಾಕುಮಾರಿ ಅಭಿಪ್ರಾಯಪಟ್ಟರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಗುಟ್ಟೆ ಗ್ರಾಮದಲ್ಲಿ ಅಭಿನಯ ರಂಗ ಕೇಂದ್ರ ಕರ್ನಾಟಕ ಬೆಂಗಳೂರು ಇವರ ಆಶ್ರಯದಲ್ಲಿ 5 ದಿನಗಳ ಕಾಲ ಹಮ್ಮಿಕೊಂಡಿರುವ ಜಾನಪದ ಮತ್ತು ಗ್ರಾಮೀಣ ಪೌರಾಣಿಕ ನಾಟಕೋತ್ಸವ ಹಾಗೂ ರಂಗ ಮಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಬೇರು ಹಳ್ಳಿಗಾಡಿನಲ್ಲಿವೆ. ಅನಕ್ಷರಸ್ಥ ಜನರು ರಾಗಿ ಬೀಸುವಾಗ, ಬತ್ತ ಕುಟ್ಟುವಾಗ, ಪೈರು ನಾಟಿ ಮಾಡುವಾಗ ಕಟ್ಟಿ ಹಾಡಿದ ಹಾಡು, ನಾಟಕ ಮತ್ತು ಕಲಾ ಪ್ರಕಾರಗಳು ಇಂದಿಗೂ ಜೀವಂತವಾಗಿವೆ. ನಾಟಕಗಳಿಗೆ ಜನರ ಮನಸ್ಸು ಪರಿವರ್ತಿಸುವ ಶಕ್ತಿಯಿದೆ.ಇಂತಹ ಪೌರಾಣಿಕ ನಾಟಕಗಳಲ್ಲಿನ ಕಥೆಯನ್ನು ಅಭಿನಯ ರಂಗ ಕೇಂದ್ರ ಪ್ರತಿ ವರ್ಷ ಆಂಧ್ರ ಗಡಿ ಭಾಗ ಕೊಡಿಗೇನಹಳ್ಳಿ ಹೋಬಳಿ ಮತ್ತಿತರೆ ಭಾಗಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಜನಮನ ಗೆದ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾರಂಗದ ಪಿ.ಸಿ. ಜಯಕುಮಾರ್ ಮಾತನಾಡಿದರು. ಅಭಿನಯ ರಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅಶ್ವತ್ಥ ್ಥನಾರಾಯಣ ಪ್ರಾಸ್ತಾವಿಕ ಭಾಷಣ ಮಾಡಿದರು. ತಾಪಂ ಸದಸ್ಯೆ ನಾಗಮಣಿ, ಜಿ.ಸಿ.ರುದ್ರಯ್ಯ, ಜಿ.ಹೆಚ್.ದೇವರಾಜು, ಗುಟ್ಟೆ ಮೂರ್ತಿ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.