ಪೊರಕೆ ಜಾಥಾ
ತುಮಕೂರು: ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ನಗರದಲ್ಲಿ ಫೆ. 22ರಂದು ಬೆ. 11 ಗಂಟೆಗೆ ಪೊರಕೆ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಚಿಕ್ಕಪೇಟೆ ಸರ್ಕಲ್, ಚರ್ಚ್ ಸರ್ಕಲ್, ಗುಂಚಿ ಸರ್ಕಲ್, ಎಂ.ಜಿ. ರಸ್ತೆ, ಟೌನ್ಹಾಲ್, ಭದ್ರಮ್ಮ ವೃತ್ತ, ಎಸ್.ಎಸ್. ಪುರಂ, ಎಸ್ಐಟಿ ಗೇಟ್, ಎಸ್ಐಟಿ ಮುಂಭಾಗದ ಗೇಟ್ ಹತ್ತಿರ ಜಾಥಾ ಮುಕ್ತಾಯವಾಗುತ್ತದೆ .
ನಾಳೆ ತೀರ್ಥಂಕರ ಮಹೋತ್ಸವ
ಗುಬ್ಬಿ: ತಾಲೂಕಿನ ಅದಲಗೆರೆ ಗೃಹ ಚೈತ್ಯಾಲಯದಲ್ಲಿ 1008 ಶಾಂತಿನಾಥ ತೀರ್ಥಂಕರರ 3ನೇ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮವು ಫೆ. 23 ರಂದು ನಡೆಯಲಿದ್ದು ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಆಚಾರ್ಯ 108 ವಿದ್ಯಾಸಾಗರ ದಿಗಂಬರ ಜೈನ ತರುಣ ಸಂಘದ ಅಧ್ಯಕ್ಷ ಎ.ಜೆ. ಜ್ವಾಲಣ್ಣ ತಿಳಿಸಿದ್ದಾರೆ. ಅಂದು ಬೆಳಗ್ಗೆ 6.15 ಗಂಟೆಗೆ ದ್ವಜಾರೋಹಣ, 7.30 ಕ್ಕೆ ನಿತ್ಯ ಪೂಜೆ, 8.30 ಕ್ಕೆ ಶಾಂತಿವಕ್ರ ಆರಾದನೆ ಮತ್ತು 108 ಕಳಷಾಭಿಷೇಕ ನಡೆಯಲಿದ್ದು ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಂಸದ ಜಿ.ಎಸ್.ಬಸವರಾಜು, ಶಾಸಕ ಎಸ್.ಆರ್.ಶ್ರೀನಿವಾಸ್, ಎಂ.ಜೆ.ಇಂದ್ರಕುಮಾರ್, ಎ.ಸಿ.ವಿದ್ಯಾಸಾಗರ್ ಮತ್ತಿತರರು ಭಾಗವಹಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.