ಹಾಲು ಸಹಕಾರ ಸಂಘಕ್ಕೆ ಆಯ್ಕೆ
ತಿಪಟೂರು: ತಾಲೂಕಿನ ಸಾರ್ಥವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2014ರಿಂದ 2019ನೇ ಸಾಲಿನವರೆಗಿನ ಐದು ವರ್ಷಗಳ ಆಡಳಿತಾವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಾಮಾನ್ಯ ಕ್ಷೇತ್ರದಿಂದ ಎಂ.ಶಿವಕುಮಾರಯ್ಯ, ಬಿ.ಎಸ್.ಶೇಖರಪ್ಪ, ಎ.ಹೆಚ್.ಬಸವರಾಜು, ರಾಜಶೇಖರಪ್ಪ, ಎಸ್.ಎಲ್.ನಾಗರಾಜು, ಹೆಚ್.ಎಂ. ಚಂದ್ರಶೇಖರ್, ಲೋಕೇಶ, ಮಹಿಳಾ ಕ್ಷೇತ್ರದಿಂದ ವಾಣಿ ಸತ್ಯನಾರಾಯಣ, ಎಂ.ಸಿ. ಲತಾ, ಪರಿಶಿಷ್ಟ ಜಾತಿ, ಪಂಗಡದಿಂದ ಶಂಕರನಾಯ್ಕ, ಹಿಂದುಳಿದ ವರ್ಗದಿಂದ ಎಚ್.ಟಿ.ಚಂದ್ರಯ್ಯ ಆಯ್ಕೆ.
ಸಿಎಂ ಹೇಳಿಕೆ ಎಬಿವಿಪಿ ಖಂಡನೆ
ತಿಪಟೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿದ್ಯಾರ್ಥಿ ವೇತನ ವಂಚಿತ ವಿದ್ಯಾರ್ಥಿಗಳು ಸರ್ಕಾರವನ್ನು ಪ್ರಶ್ನಿಸಿ ಹೋರಾಟ ಅಥವಾ ಪ್ರತಿಭಟನೆ ಮಾಡಿದರೆ ವಿದ್ಯಾರ್ಥಿ ವೇತನ ಕೊಡುವುದಿಲ್ಲ ಎಂಬ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿಎಂ ರಾಜ್ಯದ ವಿದ್ಯಾರ್ಥಿಗಳಿಗೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು