ಆಮ್ ಆದ್ಮಿಯ ಹೊಸ ರಾಜಕಾರಣ
ತುಮಕೂರು: ಕನ್ನಡದ ಮಹತ್ವ ಲೇಖಕರಾದ ಅನಂತಮೂರ್ತಿ, ದೇವನೂರು ಮಹಾದೇವ ಅಥವಾ ರೈತ ನಾಯಕ ಪುಟ್ಟಣ್ಣಯ್ಯ ಥರದವರು ಆಮ್ ಆದ್ಮಿ ಪಾರ್ಟಿಯ ಹೊಸ ರಾಜಕಾರಣವನ್ನು ಅಪಾರ ನಿರೀಕ್ಷೆಯಿಂದ ನೋಡುತ್ತಿರುವುದನ್ನು ಗಂಭೀರವಾಗಿ ಗಮನಿಸಬೇಕು ಎಂದು ನಟರಾಜ್ ಹುಳಿಯಾರ್ ತಿಳಿಸಿದರು. ಒಂದೆಡೆ ನಿಜವಾದ ಪ್ರಜಾಪ್ರಭುತ್ವದ ಸಾಧ್ಯತೆ, ಮತ್ತೊಂದೆಡೆ ಕಂದಾಚಾರಗ ಹೋರಾಟ ಇವೆಲ್ಲಾ ಈ ಕಾಲದ ಆಶಾದಾಯಕ ಚಲನೆಗಳಾಗಿ ಕಾಣುತ್ತಿದೆ.
ಇದರ ನಡುವೆ ಮತೀಯವಾದದ ಬೆಂಕಿ, ಸ್ತ್ರೀದಮನ ಹಾಗೂ ದಲಿತರ ಬಹಿಷ್ಕಾರದಂತ ಘಟನೆಗಳು ನಮ್ಮನ್ನು ಘಾಸಿಗೊಳಿಸದಷ್ಟು ನಾವು ಜಡರಾಗಿರುವುದು ಎಲ್ಲಾ ಸೂಕ್ಷ್ಮಜ್ಞರಲ್ಲಿ ಆತಂಕ ಹುಟ್ಟಿಸುತ್ತದೆ ಎಂದರು. ಆದರೂ ಅದೇ ವೇಳೆಗೆ ಅಪಾರ ಆತ್ಮಗೌರವದ ದಲಿತ ತಲೆಮಾರು ಸೃಷ್ಟಿಯಾಗುತ್ತಿರುವ ಪ್ರಗತಿಪರ ಬೆಳವಣಿಗೆಯೂ ನಮ್ಮ ಮುಂದಿದೆ ಎಂದರು.