ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿ ಪಾತ್ರ ಅಗತ್ಯ: ಎಂ.ಜಿ. ಸಿದ್ದರಾಮಯ್ಯ
ತಿಪಟೂರು: ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಶಕ್ತಿಯ ಪಾತ್ರ ಅಗತ್ಯವಾಗಿದ್ದು, ಈಗಿನಿಂದಲೇ ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇಶದ ಸತ್ಪ್ರಜೆಗಳಾಗಬೇಕೆಂದು ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ತಿಳಿಸಿದರು.
ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ 3ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು ವಿದ್ಯಾರ್ಥಿಗಳು ಶಿಸ್ತು, ಸಂಯಮ,ಶ್ರದ್ದೆಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಪುಣ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲೊಂದಾದ ಶ್ರೀ ರಂಗಾಪುರ ಸುಕ್ಷೇತ್ರದಲ್ಲಿ ಇಂತಹ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.
ವಚನಕಾರರಾದ ಪ್ರೊ.ಬಿ.ಆರ್. ರೇಣುಕಪ್ರಸಾದ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಸಾಗಿ ಅಸಾಧ್ಯವಾದುದನ್ನು ಸಾಧಿಸಬೇಕಾದರೆ ಆತ್ಮಸ್ಥೈರ್ಯ ಮುಖ್ಯ ಎಂದರು.
ಉಪನ್ಯಾಸಕ ಪ್ರೊ. ಈರಯ್ಯ, ಉಪನ್ಯಾಸಕ ವೈ.ಬಿ. ಪುಟ್ಟಸ್ವಾಮಿ ಮಾತನಾಡಿದರು. ಪ್ರೊ.ಎಚ್.ಬಿ.ಕುಮಾರಸ್ವಾಮಿ, ಕೆ.ಟಿ.ಚನ್ನಬಸವಯ್ಯ, ಈಚನೂರು ರಾಜಶೇಖರ್, ಹಿಂದಿ ಉಪನ್ಯಾಸಕ ಪಾಲಾಕ್ಷಯ್ಯ ಇದ್ದರು.