5 ವರ್ಷ ಮುಂದುವರಿಕೆ
ತುಮಕೂರು: ಹಾಲಿ ಪಾಲಿಕೆಗಳಾಗಿ ಮೇಲ್ದರ್ಜೆಗೇರಿರುವ ತುಮಕೂರು, ಬಿಜಾಪುರ, ಶಿವಮೊಗ್ಗ ನಗರಸಭೆಯ ಹಾಲಿ ಸದಸ್ಯರನ್ನೇ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ನಿಯಮಕ್ಕೆ ತಿದ್ದುಪಡಿ ತಂದು, ಹಾಲಿ ನಡೆಯುತ್ತಿರುವ ಅಧಿವೇಶನದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು. ಹೊಸದಾಗಿ ಚುನಾವಣೆ ನಡೆಸುವುದರಿಂದ ಬೊಕ್ಕಸಕ್ಕೆ ನಷ್ಟ. ತೀರ್ಮಾನ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.