ಕೋಳಿ ಫಾರಂ ಸ್ಥಳಾಂತರಕ್ಕೆ ಆಗ್ರಹ: ವಿದ್ಯಾರ್ಥಿಗಳ ಸಾಥ್
ಶಿರಾ: ಕಳೆದ ಆರು ದಿನಗಳಿಂದಲೂ ಶಿರಾ ನಗರದ ತಹಸೀಲ್ದಾರ್ ಕಚೇರಿಯ ಮುಂದೆ ಹಲ್ಕೂರು ಕೋಳಿ ಫಾರಂ ಸ್ಥಳಾಂತರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ನಡೆಸುತ್ತಿರುವ ನಿರಂತರ ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳು ಕೂಡ ರೈತರ ಪ್ರತಿಭಟನೆಗೆ ಸಾಥ್ ನೀಡಿದರು.
ಕಳೆದ 6 ದಿನಗಳಿಂದಲೂ ತಹಸೀಲ್ದಾರ್ ಕಚೇರಿ ಮುಂದೆ ಹಲ್ಕೂರು ಕೋಳಿ ಫಾರಂನಿಂದ ಆಗುತ್ತಿರುವ
ಅನಾರೋಗ್ಯ ಹಾಗೂ ರೈತರ ಸಂಕಷ್ಟಗಳನ್ನು ಈಡೇರಿಸುವಂತೆ ಹಾಗೂ ಕೋಳಿ ಫಾರಂನಿಂದ ನೊಣಗಳ ಕಾಟ ಹೆಚ್ಚಾಗಿದ್ದು, ಕೂಡಲೇ ಅದನ್ನು ಮುಚ್ಚಿಸುವಂತೆ ಹಲ್ಕೂರು-ಚೆನ್ನನಕುಂಟೆ, ಅರೇಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸದರಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹಲ್ಕೂರು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕೂಡ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.