ಬೆಸ್ಕಾಂ ಕಿರಿಯ ಅಭಿಯಂತರ-ಜವಾನ ನಡುವೆ ಜಟಾಪಟಿ
ಕುಣಿಗಲ್: ಮಾಹಿತಿ ಹಕ್ಕಿನಡಿಯಲ್ಲಿ ಕಿರಿಯ ಅಭಿಯಂತರರ ಕೆಲ ಮಾಹಿತಿಗಳನ್ನು, ಕೆಳಹಂತದ ಸಿಬ್ಬಂದಿ ಪರೋಕ್ಷವಾಗಿ ಕೇಳಿದ್ದರ ಹಿನ್ನೆಲೆಯಲ್ಲಿ, ಬೆಸ್ಕಾಂ ಕಿರಿಯ ಅಭಿಯಂತರ, ಜವಾನನ್ನು ಥಳಿಸಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.
ಹೆಬ್ಬೂರು ಬೆಸ್ಕಾಂ ಇಲಾಖೆಯಲ್ಲಿ ಜೆಇ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ, ಹಾಲಿ ತಾಲೂಕಿನ ಅಂಚೇಪಾಳ್ಯ ವಿದ್ಯುತ್ ಸ್ವೀಕರಣೆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಹಿಂದೆ ಹೆಬ್ಬೂರು ಬೆಸ್ಕಾಂ ಕಚೇರಿಯಲ್ಲಿ ಜವಾನನಾಗಿದ್ದ ರವೀಶ್ಎಂಬಾತ, ಪರೋಕ್ಷವಾಗಿ ಕೆಲ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಕೇಳಿದ್ದರ ಹಿನ್ನೆಲೆಯಲ್ಲಿ, ತಾಲೂಕಿನ ಕುರುಡಿಹಳ್ಳಿ ಬಳಿ ರವೀಶ್ ಬರುವಾಗ, ಎದುರಿಗೆ ಬಂದ ಜೆಇ ಜಯಕುಮಾರ್ ಈ ವಿಷಯವಾಗಿ ವಾಗ್ವಾದ ನಡೆಸಿದ. ಇಬ್ಬರೂ ಪರಸ್ಪರ ಬಡಿದಾಡಿಕೊಂಡರು.