ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ

Rashmi Kasaragodu
Updated On : 25 Feb 2014, 2:23 am

ತಿಪಟೂರು: ಮಹಿಳೆಯರು ಜಾಗೃತರಾಗುವ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್. ಶಿಲ್ಪ ಕರೆ ನೀಡಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಬದುಕು ಸಂಸ್ಥೆ  ಸಹಯೋಗದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ
ಕುರಿತ ಜಾಗೃತಿ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರನ್ನು ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳದಿಂದ ಹೊರಹಾಕುವ ಸನ್ನಿವೇಶಗಳು ಕಂಡುಬಂದರೆ ಅಂತಹ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತಂದರೆ ನ್ಯಾಯಾಲಯವು ನ್ಯಾಯಯುತವಾದ ತೀರ್ಪುಕೊಡುವುದರ ಜೊತೆಗೆ ಜೀವನಾಂಶ,ಪರಿಹಾರ ಇತ್ಯಾದಿ ಆದೇಶ ನೀಡಲು ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದರು.
ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಎಸ್.ಎಂ. ದಿಬ್ಬದಮನಿ ಮಹಿಳೆಯರು ಕಾನೂನಿನ ಜ್ಞಾನ ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಮಂಜುನಾಥ್ ಸಮಾಜದಲ್ಲಿ ಕೆಳವರ್ಗದವರಿಗೂ ಕಾನೂನಿನ ಲಭ್ಯತೆಯಿದ್ದು ಈ ಬಗ್ಗೆ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮಹಿಳೆಯರು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ವಿಶೇಷ ಕಾಯ್ದೆ:  ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಮೂರ್ತಿ ಮಾತನಾಡಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆಯಡಿಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಮಕ್ಕಳನ್ನು ಕಾಮ ಪ್ರಚೋದಕವಾಗಿ ಬಳಸುವುದನ್ನು ತಡೆಗಟ್ಟಲು ವಿಶೇಷ ಕಾಯ್ದೆಯನ್ನು ಸರ್ಕಾರವು ಜಾರಿಗೆ ತಂದಿದ್ದು, ಇಂತಹ ಪ್ರಕರಣಗಳು ನಡೆದಲ್ಲಿ ತಕ್ಷಣವೇ ಹತ್ತಿರದ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದಲ್ಲಿ ಈ ಬಗ್ಗೆ ಮಹಿಳಾ ಪೊಲೀಸ್ ಅಧಿಕಾರಿ ಪೋಷಕರ ಸಮಕ್ಷಮ ಹೇಳಿಕೆ ದಾಖಲಿಸಿ ಮಗುವಿನ ಸಾಕ್ಷಿ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರು ತ್ವರಿತವಾಗಿ ಗೌಪ್ಯ ವಿಚಾರಣೆ ಜರುಗಿಸಿ ಮಗುವಿಗೆ ಅತ್ಯವಶ್ಯಕವಿರುವ ವೈದ್ಯಕೀಯ ಚಿಕಿತ್ಸೆ ದೊರಕಿಸುವುದರ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಕಾನೂನು ಅಂಶವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ವಕೀಲ ಕೃಷ್ಣೇಗೌಡ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತು, ವಕೀಲರ ಸಂಘದ ಅಧ್ಯಕ್ಷ ಜಯಣ್ಣ ಬಾಲ್ಯವಿವಾಹ, ವರದಕ್ಷಿಣೆ ನಿಷೇಧ ಕಾಯ್ದೆ, ಜನನ ಮರಣ ನೊಂದಣಿ, ಆಸ್ತಿ ಹಕ್ಕು ಕುರಿತು, ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಟಿ.ಎಸ್. ಉಮೇಶ್ ಆರೋಗ್ಯ ವಿಷಯ ಕುರಿತು ವಿವರಗಳನ್ನು ತಿಳಿಸಿದರು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ನವೀನ ಮಾತನಾಡಿದರು. ಸಿಡಿಪಿಓ ಓಂಕಾರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ತಾ. ಅರೋಗ್ಯಾಧಿಕಾರಿ ಡಾ.ಟಿ.ಆರ್. ಸ್ವಾಮಿ, ನಗರಠಾಣೆ ಸಬ್ ಇನ್ಸ್ಫೆಕ್ಟರ್ ಘೋರ್ಪಡೆ, ಮೇಲ್ವಿಚಾರಕಿ ಪದ್ಮ ಹಾಜರಿದ್ದರು. ಶಿವಮ್ಮ ಪ್ರಾರ್ಥಿಸಿ, ಎಸಿಡಿಪಿಓ ಸುಂದರಮ್ಮ ಸ್ವಾಗತಿಸಿ, ಮೇಲ್ವಿಚಾರಕಿಯರಾದ ಬಿ.ಎನ್.ಪ್ರೇಮಾ ನಿರೂಪಿಸಿ, ರಾಧಾ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement