ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ

Rashmi Kasaragodu
Updated On : 25 Feb 2014, 2:25 am

ತುರುವೇಕೆರೆ: ತಾಲೂಕಿನ ಮರಸರಕೊಟ್ಟಿಗೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕ ಎಂ.ಟಿ. ಕೃಷ್ಣಪ್ಪ ಶಂಕುಸ್ಥಾಪನೆ ನೆರವೇರಿಸಿದರು.
 ಪ್ರಾರಂಭಿಕವಾಗಿ ಕಟ್ಟಡದ ತಳಹದಿಗಾಗಿ ಸುಮಾರು 90 ಸಾವಿರ ರು.ಗಳ ಬಿಡುಗಡೆಯಾಗಿದ್ದು ಹಂತ ಹಂತವಾಗಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ. ಮಹಲಿಂಗಯ್ಯ, ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ವಿವೇಕಾನಂದಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸಿ.ಚಿಕ್ಕಗಂಗಯ್ಯ, ವಿಸ್ತರಣಾಧಿಕಾರಿ ಕೆ.ಪಿ. ಮಂಜುನಾಥ್, ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ರಾಮಚಂದ್ರು, ರೇಣುಕಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಎಂ.ಎಸ್. ನಟರಾಜು, ಜಯ್ಯಮ್ಮ, ಮರಸರಕೊಟ್ಟಿಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಗುತ್ತಿಗೆದಾರರಾದ ಡಿ.ಕಾಂತಯ್ಯ, ನಿರ್ದೇಶಕರಾದ ಕೆ.ನಂಜಪ್ಪ, ಎಂ.ಜೆ.ಸುರೇಶ್, ಎಂ.ಆರ್.ಗಂಗಣ್ಣ, ಅಡವೇಶ್, ಎಂ.ಎನ್.ರವೀಂದ್ರ, ಎಂ.ಬಿ.ನಾಗರಾಜು, ರಂಗಪ್ಪ, ಜಿ.ಆರ್.ಉಷಾ ವಿರೂಪಾಕ್ಷ, ಕಾರ್ಯದರ್ಶಿ ಎಂ.ಎನ್. ರಾಕೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement