ಕರ್ತವ್ಯ ಲೋಪ: ಅಮಾನತು
ಕುಣಿಗಲ್: ಕರ್ತವ್ಯ ಲೋಪದ ಆರೋಪದ ಮೇರೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಜಿಪಂ ಸಹಾಯಕ ಅಭಿಯಂತರರನ್ನು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಮಾನತು ಗೊಳಿಸಿರುವ ಘಟನೆ ನಡೆದಿದೆ.
ನರೇಗ ಕಾಮಗಾರಿಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಎನ್ಎಂಆರ್ಗಳ ದಾಖಲೆ ಕಾರ್ಯ ಸೇರಿದಂತೆ ಇತರೆ ಕಾರ್ಯಭಾರಗಳನ್ನು ಸಂಬಂಧಪಟ್ಟ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಮೇರೆಗೆ ನಿರ್ವಹಿಸುವಂತೆ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಆದರೆ, ಇದನ್ನು ಉಲ್ಲಂಘಿಸಿ ನಾಗಸಂದ್ರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಣ್ಣ ಎಂಬುವವರು ಎನ್ಎಂಆರ್ಗಳನ್ನು ಮತ್ತು ಇತರೆ ಕಾರ್ಯಗಳನ್ನು ನಿರ್ವಹಿಸಿ, ಕರ್ತವ್ಯಲೋಪ ಎಸಗಿದ್ದರ ಹಿನ್ನೆಲೆಯಲ್ಲಿ ಅವರನ್ನು ಮತ್ತೊಂದು ಪ್ರಕರಣದಲ್ಲಿ ಜಿಪಂ ಎಂಜಿನಿಯರಿಂಗ್ ವಿಭಾಗದ ಸಹಾಯ ಅಭಿಯಂತರ ಕ್ಷೇತ್ರಪಾಲ್ ಎಂಬುವವರು ಕರ್ತವ್ಯಲೋಪ ಎಸಗಿದ್ದು ಅವರನ್ನು ಮತ್ತು ಜಿಪಂ ಸಿಇಒ ಅಮಾನತುಗೊಳಿಸಿ ಆದೇಶಿದ್ದಾರೆ.