ಜಿಲೆಟಿನ್, ಎಲೆಕ್ಟ್ರಿಕಲ್ ಡಿಟೋನೇಟರ್ ಸ್ಫೋಟಕಗಳ ಪತ್ತೆ: ಮೂವರ ಬಂಧನ
ಶಿರಾ : ಗಣಿಗಾರಿಕೆಗೆ ಬಳಸುವ ಅಪಾಯಕಾರಿ ಜಿಲೆಟಿನ್ ಹಾಗೂ ಎಲೆಕ್ಟ್ರಿಕಲ್ ಡಿಟೋನೇಟರ್ ಬಾಂಬ್ಗಳನ್ನು ಕಳ್ಳಂಬೆಳ್ಳ ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಯಸಂದ್ರ ಗ್ರಾಮದ ವಾಸಿಗಳಾದ ಶಿವಲಿಂಗಯ್ಯ, ಸಿದ್ದರಾಜು, ಮತ್ತು ಮೀನಾಕ್ಷಪ್ಪ ಎಂಬುವರೇ ಬಂಧಿತ ಆರೋಪಿಗಳು. ಇವರುಗಳಿಗೆ ತುಮಕೂರು ವಾಸಿಗಳಾದ ಕರಿಯಪ್ಪ ಮತ್ತು ಸತ್ಯನಾರಾಯಣ ಎಂಬುವರು ಕಾನೂನು ಬಾಹಿರವಾಗಿ ಈ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಳ್ಳಂಬೆಳ್ಳ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸರಣಿ ಅಪಘಾತ: ವ್ಯಕ್ತಿ ಸಾವು
ಶಿರಾ : ತಾಲೂಕಿನ ಕುಂಟೇಗೌಡನಹಳ್ಳಿ ರಾ.ಹೆ.4 ರಲ್ಲಿ ಸರಣಿ ಅಪಘಾತದಲ್ಲಿ 4 ವಾಹನಗಳು ಒಂದಕ್ಕೊಂದು ಪರಸ್ಪರ ಡಿಕ್ಕಿ ಹೊಡೆದು ಒಬ್ಬ ಸಾವನ್ನಪ್ಪಿರುವ ಘಟನೆ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿ ತುಮಕೂರಿನ ಸನಾವುಲ್ಲಾ (40) ಎಂದು ತಿಳಿದು ಬಂದಿದ್ದು, ಅಪಘಾತದಲ್ಲಿ 2 ಲಗೇಜ್ ಆಟೋ, 1 ಟಾಟಾ ಎಸಿ, 1 ಕ್ಯಾಂಟರ್ ವಾಹನಗಳು ಜಖಂಗೊಂಡಿವೆ. ಕಳ್ಳಂಬೆಳ್ಳ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.