ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೈಭವಯುತ ಗಿರಿಜಾ ಕಲ್ಯಾಣೋತ್ಸವ

Rashmi Kasaragodu
Updated On : 26 Feb 2014, 1:28 am

ಹುಳಿಯಾರು: ಇಲ್ಲಿನ ಆರ್ಯವೈಶ್ಯ ಮಂಡಳಿಯವರು ಪಟ್ಟಣದ ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ನಡೆಸಿದ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮವು ವೈಭವಯುತವಾಗಿ ನಡೆಯಿತು.
ಅಂದು ಬೆಳಗ್ಗಿನಿಂದಲೇ ಪಾರ್ವತಿ ಪರಮೇಶ್ವರ ಮೂರ್ತಿಗಳನ್ನು ಸಿದ್ಧಗೊಳಿಸಿ ನಾಂದಿ, ವರಪೂಜೆ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಿ ನಂತರ ವೃಷಭ ಲಗ್ನದಲ್ಲಿ ಮಹೂರ್ತ ಕಾರ್ಯ ನಡೆಸಲಾಯಿತು. ಮಧ್ಯಾಹ್ನ ಪಟ್ಟಣದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಇದೇ ದಿನ ರಾತ್ರಿ
ಪ್ರಾಕಾರೋತ್ಸವ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಆರ್ಯವೈಶ್ಯಮಂಡಳಿಯ ಶ್ರೀನಿವಾಸಶೆಟ್ರು, ಟಿ.ಆರ್.ರಂಗನಾಥ್, ಎಲ್.ಆರ್. ಚಂದ್ರಶೇಖರ್, ರಾಮನಾಥ್,ಶ್ರೀನಿವಾಸ್, ವಾಸವಿಯುವ ಜನಸಂಘದ ನವೀನ್, ನಂದೀಶ್, ಅಜೆಯ್, ಅರವಿಂದ್, ಶ್ರೇಯಸ್, ಕನ್ನಿಕಾಪರಮೇಶ್ವರಿ ಸಹಕಾರಸಂಘದ ರಮಾಕಾಂತ್, ಗೋವಿಂದರಾಜು, ರಾಮಮೂರ್ತಿ, ಆರ್ಯವೈಶ್ಯ ಮಹಿಳಾ ಸಂಘದ ಜ್ಯೋತಿನಾಗರಾಜು, ಅನಿತಾ, ಶಿಲ್ಪಾ, ಗಾಯತ್ರಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು ಗಿರಿಜಾ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement