ಶಾಲೆಗೆ ಉಚಿತ ತಟ್ಟೆ, ಲೋಟ ವಿತರಣೆ
ತಿಪಟೂರು: ತಾಲೂಕಿನ ಮಾರುಗೊಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಶಾಲೆಗೆ ಪಿಠೋಪಕರಣ ಮತ್ತು ನಾಗತೀಹಳ್ಳಿ, ಮಾರುಗೊಂಡನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಶಾಲೆಗೆ ಉಚಿತ ತಟ್ಟೆ, ಲೋಟ ವಿತರಣೆ ಮಾಡಲಾಯಿತು. ತಾ.ಪಂ.ಸದಸ್ಯೆ ಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರವೇ ತಾ.ಅಧ್ಯಕ್ಷ ಕುಮಾರ್ ಯಾದವ್, ಅಧ್ಯಕ್ಷೆ ಭಾಗ್ಯಮ್ಮ, ಗ್ರಾ.ಪಂ.ಸದಸ್ಯರಾದ ದಾಸಪ್ಪ, ಬಸವರಾಜು, ಪ್ರಸನ್ನ ಕುಮಾರ್, ರಘು ಮತ್ತಿತರರಿದ್ದರು