ಶಿವರಾತ್ರಿ ಮಹೋತ್ಸವ
ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಶೆಟ್ಟಿಹಳ್ಳಿ ಬೆಟ್ಟದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿಯವರ ಶಿವರಾತ್ರಿ ಮಹೋತ್ಸವವು ಶ್ರೀ ಕ್ಷೇತ್ರದ ಅಧ್ಯಕ್ಷರಾದ ಬಳ್ಳೆಕಟ್ಟೆ-ಶಿಡ್ಲೇಹಳ್ಳಿ ಸಂಸ್ಥಾನದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಫೆ. 27 ಮತ್ತು 28ರಂದು ಅದ್ಧೂರಿಯಾಗಿ ನಡೆಯಲಿದೆ. ಫೆ.27ರಂದು ಶಿವರಾತ್ರಿ ಮಹೋತ್ಸವದ ಪ್ರಯುಕ್ತ ರಾತ್ರಿ ಪಾರಾಯಣ, ರುದ್ರಾಭಿಷೇಕ ವಿಜೃಂಭಣೆಯಿಂದ ನಡೆಯಲಿದೆ. ಫೆ.28ರಂದು ರಾತ್ರಿ 8ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ಶ್ರೀಸ್ವಾಮಿಯವರ ಉತ್ಸವವು ಜಾನಪದ ಕಲಾತಂಡಗಳೊಂದಿಗೆ ನಡೆಯಲಿದೆ.