ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದು ಮುಡಿಸೇವೆ

Rashmi Kasaragodu
Updated On : 28 Feb 2014, 1:22 am

ತಿಪಟೂರು: ತಾಲೂಕು ಆಲೂರಿನ ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಫೆ. 28 ರಂದು ಬೆಳಗ್ಗೆ 11.30 ಕ್ಕೆ ಶಿವರಾತ್ರಿ ಮೀಸಲು ಅಕ್ಕಿ ಅಳೆಯುವ, ಹರಕೆ ಸಲ್ಲಿಕೆ, ಮುಡಿಸೇವೆ ಆಯೋಜಿಸಲಾಗಿದೆ. ಅಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಾನಂದ ಪುರಿ ಸ್ವಾಮೀಜಿ, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೆರವೇರಿಸುವರು. ಅಧ್ಯಕ್ಷತೆಯನ್ನು  ಬಾಲವರ್ಧನ್ ವಹಿಸಲಿದ್ದಾರೆ. ಸಂಸದ ಜಿ.ಎಸ್. ಬಸವರಾಜು, ಡಾ. ಎಂ.ಆರ್. ಹುಲಿನಾಯ್ಕರ್, ಕೆ. ಷಡಕ್ಷರಿ, ಗಾಯಿತ್ರಿ ಶಾಂತೇಗೌಡ, ಬಿ. ಸಿಂದು, ಬಿ.ಸಿ. ನಾಗೇಶ್, ಬಿ. ನಂಜಾಮರಿ, ಎಸ್. ನಾಗಣ್ಣ, ಆಗಮಿಸಲಿದ್ದಾರೆ.


ಅಹೋ ರಾತ್ರಿ ಧರಣಿ ಮುಕ್ತಾಯ


ತುರುವೇಕೆರೆ: ಕಳೆದ ಎರಡು ದಿನಗಳಿಂದ ಹೇಮಾವತಿ ನಾಲಾ ಕಚೇರಿ ಮುಂಭಾಗ ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ, ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಮುಕ್ತಾಯ ಕಂಡಿದೆ.
ದಿನಗೂಲಿ ನೌಕರರು ತಮ್ಮನ್ನು ಕಾಯಂಗೊಳಿಸಬೇಕು ಹಾಗೂ  ವರ್ಷ ಪೂರ್ತಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಸರ್ಕಾರದಿಂದ ಮಾತ್ರ ಬಗೆಹರಿಸಲು ಸಾಧ್ಯ. ಆದರೆ ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಮುಂಬರುವ ಖಚಿತಪಡಿಸಿದ ದಿನಾಂಕದಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಎಂಜಿನಿಯರ್‌ರ ಸಮ್ಮುಖ ಬಗೆಹರಿಸುವ ಭರವಸೆಯನ್ನು ಹೇಮಾವತಿ ನಾಲಾ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಜೇಗೌಡ ಮುಷ್ಕರ ನಿರತರಿಗೆ ನೀಡಿದರು.
ಹಲವಾರು ದಿನಗೂಲಿ ನೌಕರರಿಗೆ ದಿನಗೂಲಿ ನೀಡದಿರುವ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ದಿನಗೂಲಿ ನೌಕರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಸ್ಥಳಕ್ಕೆ ತಹಸೀಲ್ದಾರ್ ನಂಜಪ್ಪ ಆಗಮಿಸಿದ್ದರು. ಮುಂಬರುವ ನಿಗದಿತ ದಿನದಂದು ತಾವೂ ಸಭೆಗೆ ಆಗಮಿಸಿ ದಿನಗೂಲಿ ನೌಕರರ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement