ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೊಡ್ಡಹಳ್ಳಿ ಗ್ರಾಮಕ್ಕೆ ವಾಜಪೇಯಿ ವಸತಿ ಶಾಲೆ ಮಂಜೂರು: ಚೌದರಿ

Rashmi Kasaragodu
Updated On : 28 Feb 2014, 1:17 am

ಪಾವಗಡ: ತಾಲೂಕಿನ ದೊಡ್ಡಹಳ್ಳಿ ಗ್ರಾಮಕ್ಕೆ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸರ್ಕಾರದಿಂದ ಮಂಜೂರಾಗಿರುವುದಾಗಿ ತಾ.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವೈ.ಆರ್. ಚೌದರಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗಡಿ ಭಾಗದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಆಸಕ್ತಿ ವಹಿಸಿ ಸರ್ಕಾರದ ವತಿಯಿಂದ ತಾಲೂಕಿಗೆ ಎ.ಬಿ.ವಾಜಪೇಯಿ ವಸತಿ ಶಾಲೆ ಮಂಜೂರಾಗಿದೆ. ಕೂಡಲೇ ಗಡಿ ಭಾಗದ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಉನ್ನತ ವಸತಿ ಶಾಲೆ ನಿರ್ಮಿಸುವುದಾಗಿ ಅವರು ತಿಳಿಸಿದರು. ಉಚಿತ ಪಠ್ಯ ಪುಸ್ತಕ, ಶುದ್ಧ ಕುಡಿಯುವ ನೀರು, ಸುಸಜ್ಜಿತ ವಾತಾವರಣ ಹಾಗೂ ಇತರೆ ಮೂಲಭೂತ ಸೌಲಭ್ಯಗಳು ಇವೆ. ವಾಜಪೇಯಿ ಶಾಲೆಯಲ್ಲಿ ವಸತಿ ಸೌಲಭ್ಯವಿರುವುದರಿಂದ 6ರಿಂದ 12ನೇ ತರಗತಿಯವರೆಗೆ ಅಂದರೆ ಒಟ್ಟು ತಾಲೂಕಿನ 580 ಮಂದಿ ಬಡ ವಿದ್ಯಾರ್ಥಿಗಳಿಗೆ ಎ.ಬಿ.ಪಾಜಪೇಯಿ ವಸತಿ ಶಾಲೆ ಸಹಕಾರಿಯಾಗಲಿದೆ ಎಂದರು.
ದೊಡ್ಡಹಳ್ಳಿ ಗ್ರಾಮದಲ್ಲಿ ವಾಜಪೇಯಿ ವಸತಿ ಶಾಲೆ ನಿರ್ಮಾಣಕ್ಕೆ ನಿವೇಶನ ಕೊರತೆಯನ್ನು ಮನಗಂಡ ಬೆಂಗಳೂರಿನ ವಾಸಿ ದೊಡ್ಡಹಳ್ಳಿ ಗ್ರಾಮದ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್. ರಾಮಾಂಜಿನೇಯ ಹಾಗೂ ಅವರ ಸಹೋದರ ಎಚ್. ವೆಂಕಟೇಶ್ ಚೌದರಿ ಗ್ರಾಮದ ಹೆದ್ದಾರಿಪಕ್ಕದಲ್ಲಿರುವ 8 ಎಕರೆ ಜಮೀನನ್ನು ಉಚಿತವಾಗಿ ದಾನ ನೀಡಿ ವಸತಿ ಶಾಲೆ ನಿರ್ಮಾಣಕ್ಕೆ ಸಹಕರಿಸಿದ್ದಾರೆಂದು ಅವರು ತಿಳಿಸಿದರು.
ಕೋಟ್ಯಂತರ ರು.  8ಎಕರೆ ಜಮೀನು ಉಚಿತವಾಗಿ ನೀಡಿ ದೊಡ್ಡಹಳ್ಳಿ ಗ್ರಾಮದಲ್ಲಿ ಅಟಲ್ ಬಿಹಾರಿ ಪಾಜಪೇಯಿ ವಸತಿ ಶಾಲೆ ನಿರ್ಮಾಣಕ್ಕೆ ಸಹಕರಿಸಿದ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ದೊಡ್ಡಹಳ್ಳಿ ಗ್ರಾಮದ ಎಚ್.ರಾಮಾಂಜಿನೇಯ ಹಾಗೂ ಎಚ್.ವೆಂಕಟೇಶ್ ಚೌದರಿ ಅವರ ಉದಾರತೆಯನ್ನು ಪ್ರಶಂಶಿಸಿದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಇತರೆ ಮುಖಂಡರು ಶೈಕ್ಷಣಿಕ ಪ್ರಗತಿಗೆ ಸಹೋದರರ ಸಾಮಾಜಿಕ ಕಳಕಳಿಯ ಬಗ್ಗೆ ಅಭಿನಂದನೆ ಸಲ್ಲಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement