ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮುಂದುವರಿದ ಸತ್ಯಾಗ್ರಹ

Rashmi Kasaragodu
Updated On : 28 Feb 2014, 1:19 am

ಮಾತನಾಡಿದ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ನಾಗರತ್ನಮ್ಮ ಲೋಕಸಭೆ ಚುನಾವಣೆಯ ದೃಷ್ಟಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮಾರ್ಚ್ 3 ರಂದು ತರಾತುರಿಯಲ್ಲಿ ಉದ್ಘಾಟನೆ ಮಾಡ ಹೊರಟಿದೆ ಎಂದರು.
ಈ ಎತ್ತಿನಹೊಳೆ ಸರ್ಕಾರ ಅನುಷ್ಠಾನಕ್ಕೆ ತರಲು ಹೊರಟಿರುವ ಯೋಜನೆ ಅವೈಜ್ಞಾನಿಕವಾಗಿದ್ದು ಈಗಾಗಲೇ ಲಕ್ಷಾಂತರ ರು.ಗಳ ವೆಚ್ಚಮಾಡಿ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಯೋಜನೆಯನ್ನು ಕೆಲವು ಭಾಗಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು ಈ ನೀರನ್ನು ಪೈಪ್ ಮುಖಾಂತರ ಮೇಲೆತ್ತಲು ವಿದ್ಯುತ್ ಅಭಾವ ರೈತರು ವಿದ್ಯುತ್ ಬಿಲ್ ಪಾವತಿಸಿಲ್ಲ ಅನ್ನುವಂತಹ ಸಬೂಬು ಕೇಳಿಬರುತ್ತಿದ್ದು  ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಕೇವಲ 24 ಟಿಎಂಸಿ ನೀರು ದೊರೆಯಲಿದೆ. ಜಿ.ಎಸ್. ಪರಮಶಿವಯ್ಯ  ವರದಿಯಿಂದ 400 ಟಿ.ಎಂ.ಸಿ. ನೀರು ಜಿಲ್ಲೆಗೆ ದೊರೆಯುತ್ತದೆ. ಜೊತೆಗೆ ಹಳ್ಳಕೊಳ್ಳಗಳು ಮತ್ತು ಅಂತರ್ ಜಲ ಜೀವಜಲ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಜಿಲ್ಲೆಗೆ ಒಳ್ಳೆದಾಗುತ್ತದೆ ಎಂದರು.
ಭಾರತೀಯ ಮಹಿಳಾ ಒಕ್ಕೂಟದ ಮುಖಂಡರಾದ ಲೀಲಾವತಿ, ರೇಣುಕಮ್ಮ ಹೋರಾಟದಲ್ಲಿ ಮಾತನಾಡಿದರು. ಹೋರಾಟ ನೇತೃತ್ವವನ್ನು ಸುಶೀಲಮ್ಮ, ಗೌರಮ್ಮ, ಸುಭದ್ರಮ್ಮ, ಸ್ವತಂತ್ರ ಹೋರಾಟಗಾರರಾದ ಟಿ.ಆರ್. ರೇವಣ್ಣ,  ಎ.ಪಿ.ಎಂ.ಸಿ. ಅಧ್ಯಕ್ಷರಾದ ಜಿ.ಎಸ್. ಶಿವಕುಮಾರ್ ಕನ್ನಡ ಸೇನೆಯ ಧನಿಯಾಕುಮಾರ್, ಗೌರವ ಅಧ್ಯಕ್ಷ ಆರ್.ಎಸ್. ವೆಂಕಟಾಚಲ ಮುಂತಾದವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.



ಕ್ಯಾತೇಲಿಂಗೇಶ್ವರ ಸ್ವಾಮಿ ಜಾತ್ರಾಮಹೋತ್ಸವ
ಹುಳಿಯಾರು: ಹೋಬಳಿ  ಸೋಮನಹಳ್ಳಿ ಮಜುರೆ ಕ್ಯಾತೇದೇವರಹಟ್ಟಿಯ ಕ್ಯಾತೇಲಿಂಗೇಶ್ವರ ಸ್ವಾಮಿ  ಜಾತ್ರಾಮಹೋತ್ಸವ ದಬ್ಬಗುಂಟೆಯ ತಮ್ಮಣ್ಣಸ್ವಾಮಿ ಕ್ಷೇತ್ರದಲ್ಲಿ ನಡೆಯಲಿದೆ.  ಶುಕ್ರವಾರ ಸಂಜೆ ಗಾಣಾಧಾಳು ಗಡಿಯಲ್ಲಿರುವ ಅಯ್ಯನ ಗುಡ್ಡೆ ಹಾಗೂ ಬಸವಣ್ಣನ ಗುಡ್ಡೆಗಳಲ್ಲಿ ಅಭಿಷೇಕ, ವಸ್ತ್ರಧಾರಣೆ, ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ರಾತ್ರಿ  ಸ್ವಾಮಿಯ ಉತ್ಸವ, ಕೋಲಾಟ, ಈಶ್ವರಯ್ಯ ತಂಡದವರಿಂದ ಕರಪಾಲಮೇಳ ಕಾರ್ಯಕ್ರಮ ನಡೆಯಲಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement