ಹಾವು ಕಚ್ಚಿ ವ್ಯಕ್ತಿ ಸಾವು
ಪಾವಗಡ: ತಮ್ಮ ತೋಟದ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ.
ವಿಷದ ಹಾವು ಕಚ್ಚಿ ಮೃತ ಪಟ್ಟ ವ್ಯಕ್ತಿ ನಾರಾಯಣಪ್ಪ (48)ಎಂಬುವರು. ವಿಷದ ಹಾವು ಆತನ ಕಾಲಿಗೆ ಕಚ್ಚಿದ ಪರಿಣಾಮ ಸ್ವಲ್ಪ ಸಮಯದಲ್ಲಿಯೇ ವಿಷ ಆತನ ದೇಹಕ್ಕೆ ಆವರಿಸಿ ಮೂರ್ಚೆ ಹೋಗಿದ್ದಾನೆ. ಕೂಡಲೇ ಗ್ರಾಮಸ್ಥರು ಚಿಕಿತ್ಸೆಗಾಗಿ ಆತನನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಆತ ಮೃತಪಟ್ಟಿರುವುದಾಗಿ ತಿಳಿದಿದೆ. ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.