ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ

Rashmi Kasaragodu
Updated On : 28 Feb 2014, 1:19 am

ಕೊರಟಗೆರೆ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಬಲೀಕರಣಗೊಂಡಂತೆ ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢಗೊಳ್ಳುವಂತೆ ಜಿಲ್ಲಾ ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ವಿಜಯಶಂಕರ್ ತಿಳಿಸಿದರು.
ಅವರು ತಾಲೂಕಿನ ಶಕುನಿತಿಮ್ಮನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದನಾ ಸಹಕಾರ ಸಂಘದ ವತಿಯಿಂದ ನೂತನವಾಗಿ ಪ್ರಾರಂಭವಾಗಿರುವ ಹಾಲು ಶೇಖರಣಾ ಕೇಂದ್ರವನ್ನು ರೈತರಿಂದ ಹಾಲು ಪಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದೊಂದಿಗೆ ರೈತರ ಜೀವನಾಡಿಯಾದ ಹೈನುಗಾರಿಕೆಯಿಂದ ನೆಮ್ಮದಿಯ ಬದುಕು ರೂಪಿಸಿಕೊಳ್ಳಬಹುದು ಪ್ರತಿಯೊಬ್ಬರೂ ವ್ಯವಸಾಯದೊಂದಿಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವಂತೆ ಕೋರಿದರು.
ಹಾಲು ಒಕ್ಕೂಟದ ಜಿಲ್ಲಾ ಪ್ರಭಾರ ಉಪ ವ್ಯವಸ್ಥಾಪಕ ಹನುಮಂತರಾಜು ಮಾತನಾಡಿ ಆಹಾರ ಕಲಬೆರೆಕೆಯಾಗದಂತೆ ಯಾವ ರೀತಿ ಎಚ್ಚರ ವಹಿಸುತ್ತೇವೆಯೋ ಅದೇ ರೀತಿ ಹಾಲು ಕಲಬೆರಕೆಯಾಗದಂತೆ ಎಚ್ಚರವಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ ಅವರು ರೈತರು ತಮ್ಮ ರಾಸುಗಳಿಗೆ ಕಾಲ ಕಾಲಕ್ಕೆ ವ್ಯಾಕ್ಸನ್ ಹಾಕಿಸುವ ಮೂಲಕ ರಾಸುಗಳನ್ನು  ಕಾಪಾಡಿಕೊಳ್ಳ ಬೇಕು ಹಾಗೂ ಎಲ್ಲಾ ಹೈನೋದ್ಯಮಿಗಳು ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.  
ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರಂಗಧಾಮಯ್ಯ, ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ಟಿ.ಆರ್. ಪುಷ್ಪಲತಾ ಮಾತನಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿಜಯಶಂಕರ್, ಗ್ರಾ.ಪಂ.ಅಧ್ಯಕ್ಷ ನಾಗಮಣಿ, ಉಪಾಧ್ಯಕ್ಷ ಕಾಳಿಚರಣ್, ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜಮ್ಮ ಕೆಂಪರಾಮಯ್ಯ, ಅರುಣ್ ಸೇರಿದಂತೆ ಹಾಲು ಉತ್ಪದನಾ ಕೇಂದ್ರದ ನಿರ್ದೇಶಕರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement