ಪುಟ್ಟರಾಜ ಗವಾಯಿಗಳ ಜನ್ಮಶತಮಾನೋತ್ಸವ
ಚಿಕ್ಕನಾಯಕನಹಳ್ಳಿ: ಸಂಗೀತ ಸಾಮ್ರಾಟ, ಪದ್ಮಭೂಷಣ, ಡಾ.ಪುಟ್ಟರಾಜ ಗವಾಯಿಗಳು ಬದುಕಿರುತ್ತಿದ್ದರೆ ಇಂದಿಗೆ ನೂರು ವಸಂತ ತುಂಬುತ್ತಿತ್ತು.
ಆದರೆ, ಅವರಿಗೆ 97ವಸಂತಗಳು ತುಂಬಿರುವಾಗ ಇಹಲೋಕವನ್ನು ತ್ಯಜಿಸಿದರು. ಗವಾಯಿಗಳು ಹುಟ್ಟಿನಿಂದಲೇ ಕುರುಡರಾಗಿದ್ದರೂ. ಸಂಗೀತ ಶಿಕ್ಷಣ ನೀಡುವ ಮೂಲಕ ಸಾವಿರಾರು ಜನರ ಬಾಳಿಗೆ ಕಣ್ಣಾಗಿದ್ದರು. ಪುಟ್ಟರಾಜ ಗವಾಯಿಗಳ ಜನ್ಮಶತಮಾನೋತ್ಸವ ಅಂಗವಾಗಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮಾ.1ರಿಂದ 3 ರವರಗೆ ನಡೆಯುವ ಸಂತಗೀತ ಗಾಯನ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂತಗೀತ ಗಾಯನ: ಯುವ ಕಲಾವಿದರಾದ ಶ್ರೀರಮೇಶ್ ಕೋಲಗುಂದ, ಸಿದ್ದಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ, ಮಳವಳ್ಳಿ ಶ್ರೀದೇವಿ ಸಂಜೀವಮೂರ್ತಿ,ಶಂಕರ ರುದ್ರವಾಡಿ, ಇವರಿಂದ ಗಾಯನ, ಕೇಶವ್ ಜೋಶಿ, ರವಿಆಳಂದ, ವಿನಯಚಂದ್ರ, ಮಲ್ಹಾಬಾದ್ ಇವರಿಂದ ತಬಲಾ ವಾದನ ಶ್ರೀಫ-ಮೃತ್ಯುಂಜಯ ಶೆಟ್ಟರ್ ಉಪನ್ಯಾಸವಿದೆ.