ಹಳೇ ವೈಷಮ್ಯ: ವ್ಯಕ್ತಿ ಮೇಲೆ ಹಲ್ಲೆ
ತುರುವೇಕೆರೆ: ಜಮೀನಿನ ಮಧ್ಯೆ ಅಳವಡಿಸಿದ್ದ ನೀರಿನ ಪೈಪ್ ತೆರವು ಮಾಡುವ ಸಂಬಂಧ ಮಾತಿಗೆ ಮಾತಿಗೆ ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆ ಕೋಳಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕಳೆದ ಐದಾರು ತಿಂಗಳಿನಿಂದ ಒಂದೇ ಜನಾಂಗದ ನಾಲ್ಕೈದು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಜಮೀನಿನ ಮಧ್ಯೆ ಹಾಯ್ದು ಹೋಗಿದ್ದ ನೀರಿನ ಪೈಪನ್ನು ತೆಗೆದುಕೊಳ್ಳುವ ಬಗ್ಗೆ ಮಾತಿನ ಚಕಮಕಿ ನಡೆದು ಕುಮಾರ್ (32) ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಗೋವಿಂದರಾಜು, ಬಸವರಾಜು, ಪುಟ್ಟೇಗೌಡ ಹಾಗೂ ರಮೇಶ್ ಎಂಬುವವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.