ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡ ನಾಡು, ನುಡಿ, ಉಳಿವಿಗೆ ಯುವ ಸಮೂಹ ಟೊಂಕ ಕಟ್ಟಿ ನಿಲ್ಲಲಿ

Mainashree
Updated On : 1 Jan 2014, 11:17 am

ಕನ್ನಡಪ್ರಭ ವಾರ್ತೆ, ತುಮಕೂರು, ಜ.1
ಕನ್ನಡ ನಾಡು, ನುಡಿ, ಉಳಿವಿಗೆ ಯುವ ಸಮೂಹ ಟೊಂಕ ಕಟ್ಟಿ ನಿಲ್ಲಬೇಕೆಂದು ಸಿಐಟಿ ಕಾರ್ಯದರ್ಶಿ ಜ್ಯೋತಿ ಗಣೇಶ್ ಕರೆ ನೀಡಿದರು
ಅವರು ನಗರದ ಮರಳೂರು ದಿಣ್ಣೆ ಬಡಾವಣೆಯಲ್ಲಿ ಕನ್ನಡ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಕನ್ನಡ ನಾಡು, ಭಾಷೆ, ನದಿ ನೀರಿನ ಹಂಚಿಕೆ ವಿಚಾರದಲ್ಲಿ ಹಲವಾರು ಜ್ವಲಂತ ಸಮಸ್ಯೆ ತಲೆದೋರಿವೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಕನ್ನಡ ಮಾತನಾಡುವ ಜನರನ್ನು ಪರಕೀಯರಂತೆ ಭಾವಿಸಲಾಗುತ್ತಿದೆ ಈ ಎಲ್ಲಾ ತಾರತಮ್ಯ ನಿವಾರಣೆಗೆ ಹೋರಾಟವೇ ಸೂಕ್ತ ಮಾರ್ಗವಾಗಿದ್ದು ಯುವ ಸಮೂಹ ತಮ್ಮಲ್ಲಿರುವ ಆಂತರಿಕ ಜಿಜ್ಞಾಸೆ ತೊರೆದು ಸಂಘಟಿತ ಹೋರಾಟ ಕೈಗೊಳ್ಳಬೇಕೆಂದರು
ಜಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ದೀಪಕ್ ಮಾತನಾಡಿ ಕನ್ನಡ ನೆಲದಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಕನ್ನಡ ಭಾಷೆ ಹಾಗು ಕನ್ನಡದ ನೆಲದ ಬಗ್ಗೆ ಅಭಿಮಾನ ತೋರುವ ಬದಲು ಲಘುವಾಗಿ ಮಾತನಾಡಿ  ಕನ್ನಡ ಭಾಷೆಗೆ ಹಾಗೂ ಕನ್ನಡ ನಾಡಿನ ಜನತೆಗೆ ಅಪಮಾನವೆಸಗಿದ್ದಾರೆ.  ಇಂತಹ ಲಜ್ಜೆಗೇಡಿ ರಾಜಕಾರಣಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು
ಜೆಡಿಎಸ್ ಮುಖಂಡ ನರಸೇಗೌಡ ಮಾತನಾಡಿ ಪರಭಾಷಿಗರ ಹಾವಳಿಗೆ ಸಿಲುಕಿರುವ ಕನ್ನಡ ಭಾಷೆ ಕನ್ನಡದ ನೆಲದಲ್ಲೇ ನೆಲೆ ಕಂಡುಕೊಳ್ಳಲಾಗದೆ ನಶಿಸುವ ಹಂತ ತಲುಪಿದೆ ಎಂದು ವಿಷಾದಿಸಿರಲ್ಲದೆ ಬಹುರಾಷ್ಟ್ರೀಯ ಕಂಪನಿಗಳೂ ಸಹ ತಮ್ಮ ಆಡಳಿತ ವ್ಯವಹಾರಗಳನ್ನು ಕನ್ನಡ ಭಾಷೆಯಲ್ಲೇ ನಿರ್ವಹಿಸಲು ಆಡಳಿತಾರೂಡ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು
ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಂಕರ್, ನಗರಾಧ್ಯಕ್ಷ ಯತೀಶ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಪ್ರೇಮಾ ಹೆಗ್ಗಡೆ ಮತ್ತಿತರೆ ಮುಖಂಡರು ಸಮಾರಂಭದಲ್ಲಿ ಉಪಸ್ತಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement