ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಸಲಕರಣೆ ವಿತರಣೆ: ವಿಭಿನ್ನ ರೀತಿ ಹೊಸ ವರ್ಷ ಆಚರಣೆ

Mainashree
Updated On : 1 Jan 2014, 11:15 am

ತುಮಕೂರು: ನಗರದ ಬೆಸ್ಕಾಂ ಉಪವಿಭಾಗದ ಕಚೇರಿಯಲ್ಲಿ ಹೊಸವರ್ಷವನ್ನು ಬೆಸ್ಕಾಂ, ಕೆಪಿಟಿಸಿಎಲ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸಲಕರಣೆಗಳನ್ನು ವಿತರಿಸುವ ಮೂಲಕ  ವಿಭಿನ್ನವಾಗಿ ಆಚರಿಸಿದರು.
ನಗರದ ಎನ್.ಆರ್. ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 115 ಮಕ್ಕಳಿಗೆ ಅಗತ್ಯವಿರುವ ಹೈಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಿದರು.
ನಗರದ ಹೃದಯ ಭಾಗದಲ್ಲಿರುವ ನರಸಿಂಹರಾಜ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅತ್ಯಂತ ಕಡುಬಡತನದಿಂದ ಬಂದವರಾಗಿದ್ದು, ಕನಿಷ್‌ಠ ಕಾಲಿಗೆ ಚಪ್ಪಲಿಯೂ ಇಲ್ಲದೆ ಶಾಲೆಗೆ ಬರುವುದನ್ನು ಗಮನಿಸಿದ ಬೆಸ್ಕಾಂ ತುಮಕೂರು ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ನ್‌ಟರಾಜ ಮತ್ತು ಸಿಬ್ಬಂದಿ ಗುರುತಿಸಿ, ಮಕ್ಕಳಿಗೆ ಅಗತ್ಯವಿರುವ ಟೈ,ಶೂ,ಸ್ಕೂಲ್ ಬ್ಯಾಗ ವಿತರಿಸಲು ತೀರ್ಮಾನಿಸಲಾಯಿತು. ಹೊಸವರ್ಷದ ದಿನದಂದು 115 ಮಕ್ಕಳಿಗೆ ಟೈ ವಿತರಿಸಲಾಯಿತು. ಜನವರಿ ತಿಂಗಳ ಅಂತ್ಯದೊಳಗೆ ಎಲ್ಲಾ ಮಕ್ಕಳಿಗೂ ಶೂ ಮತ್ತು ಸ್ಕೂಲ್ ಬ್ಯಾಗ್ ವಿತರಿಸಲು ಮುಂದಾಗಿದ್ದಾರೆ. ಮಕ್ಕಳಿಗೆ ಅಗತ್ಯವಿರುವ 20 ಜತೆ ಶೂಗಳನ್ನು ಬೆಸ್ಕಾಂನ ಚಾಲಕರ ಸಂಘ ನೀಡಲು ಮುಂದಾಗಿದೆ. ಇದರೆ ಜೊತೆಗೆ ಸಿಎಸ್‌ಟಿ 1 ಮತ್ತು 2 ಹಾಗೂ ಆರ್.ಎಸ್.ಟಿ 1 ಮತ್ತು 2ರ ಸಿಬ್ಬಂದಿಗಳು ತಲಾ 20 ಜೊತೆ ಶೂ ನೀಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement