ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಸ್ಯೆ ಬಗೆಹರಿಸುವಂತೆ ಪ್ರಾರ್ಥನ ಮಂದಿರದ ಪದಾಧಿಕಾರಿಗಳ ಮನವಿ

Mainashree
Updated On : 1 Jan 2014, 11:17 am

ಕ.ಪ್ರ.ವಾರ್ತೆ ಕುಣಿಗಲ್ ಜ.1
ಪುರಸಭೆಯ ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಕೈಗೊಂಡ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ, ಪ್ರಾರ್ಥನಾ ಮಂದಿರಕ್ಕೆ ತೆರಳಲು ಭಕ್ತರಿಗೆ ಅನಾನುಕೂಲವಾಗುತ್ತಿದ್ದು ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಪ್ರಾರ್ಥನ ಮಂದಿರದ ಪದಾಧಿಕಾರಿಗಳು, ಎರಡನೇ ವಾರ್ಡ್ ನಾಗರಿಕರು ಆಗ್ರಹಿಸಿದ್ದಾರೆ.
ಪುರಸಭೆಯ ಎರಡನೇ ವಾರ್ಡ್ ಪ್ರದೇಶದ ಮಲ್ಲಾಘಟ್ಟ ಜನತಾ ಕಾಲೋನಿಯಲ್ಲಿ 2009-10 ನೇ ಸಾಲಿನ ಎಸ್‌ಏಪ್‌ಸಿ ಯೋಜನೆ ಅಡಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ನಡೆಸಿದ್ದು, ಸದರಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ತೊಂದರೆ ಆಗಿದೆ.
ಈ ಸಮಸ್ಯೆ ಬಗೆಹರಿಸುವಂತೆ ಈಗಾಗಲೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ಇನ್ನಾದರೂ ಪುರಸಭೆಯ ಆಡಳಿತಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ನಜೀರ್, ಜಬೀವುಲ್ಲಾ, ಶಬ್ಬೀರ್ ಅಹಮದ್ ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement